ಬೆಂಗಳೂರು: `ಬಿಗ್ ಬಾಸ್’ ಸೀಸನ್ 5 ರಲ್ಲಿ ಗೆಲ್ಲುವ ಸ್ಪರ್ಧಿ ಎಂದೇ ಹೇಳಲಾಗಿದ್ದ, ತಮ್ಮದೇ ಆದ ಟ್ಯಾಲೆಂಟ್ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿದ್ದ ನಟ ಜಯರಾಂ ಕಾರ್ತಿಕ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.106 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಜೆಕೆ, ಸಿನಿಮಾ, ಕಿರುತೆರೆ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿಯೂ ಸ್ಪರ್ಧಿಗಳ ಜೊತೆ ತುಂಬಾ ಚೆನ್ನಾಗಿ ನಡೆದುಕೊಂಡು ಫಿನಾಲೆವರೆಗೂ ತಲುಪಿದ್ದು, 3 ನೇ ಸ್ಥಾನ ಗಳಿಸಿ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದಾರೆ.ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಜೆ ಕೆ ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜೆಕೆ ಸುಮಾರು 10 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ಸಿನಿಮಾಗಳಿಗಾಗಿ ವರ್ಕೌಟ್ ಕೂಡ ಮಾಡುತ್ತಿದ್ದಾರೆ.ಪ್ರಸ್ತುತ ಜಿ ಕೆ `ಮೇ 1′ ಸೇರಿದಂತೆ 2 ಚಿತ್ರಗಳನ್ನು ಅಭಿನಯಿಸುತ್ತಿದ್ದಾರೆ. ಇದರೊಂದಿಗೆ `ಬಿಗ್ ಬಾಸ್’ ಸ್ಪರ್ಧಿಗಳೊಂದಿಗೆ ಚಿತ್ರ ಮಾಡಲಿದ್ದು, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದಯಾಳ್ ಪದ್ಮನಾಭ್ ಅವರು 2 ಸಿನಿಮಾ ಸ್ಕ್ರಿಪ್ಟ್ ಗಳನ್ನು ಸಿದ್ಧ ಮಾಡಿಕೊಂಡಿದ್ದು, ಒಂದರಲ್ಲಿ ಜೆಕೆ ಹಾಗೂ ಅನುಪಮಾ ಗೌಡ ಜೊತೆಯಾಗಿ ಅಭಿನಯಿಸಲಿದ್ದಾರೆ. ಸದ್ಯದಲ್ಲೇ ಅನುಪಮಾ ಗೌಡ ಮತ್ತು ಜೆಕೆ ಜೊತೆಗಿನ ಹೊಸ ಸಿನಿಮಾ ಸೆಟ್ಟೇರಲಿದೆ.






 Advertisement 




Sign in to your account
Username or Email Address


Password

 Remember Me


