ಬೆಂಗಳೂರು: ಮಹಾ ನಗರದಲ್ಲಿ ಇಂದು ನಡೆದ ಪರಿವರ್ತನಾ ಸಮಾರೋಪಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ಸಮಾರೋಪ ಸಮಾರಂಭಕ್ಕೆ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರಿಂದ ಕಾರ್ಯಕ್ರಮವೂ ಯಶಸ್ವು ಆಯಿತು. ಸಮಾರೋಪ ಮುಕ್ತಾಯ ಆಗುತ್ತಿದಂತೆ ದೂರದ ಊರುಗಳಿಂದ ಬಂದಿದ್ದ ಕಾರ್ಯಕರ್ತರಿಗೆ ಮರಳಿ ಹೋಗಲು ಬಸ್ ಗಳೇ ಸಿಗದೇ ಪರದಾಡುವಂತಾಯ್ತು.ಸಮಾರೋಪ ಮುಗಿದು ಮೂರು ಗಂಟೆಗಳಾದ್ರೂ ಇನ್ನು ಹಲವು ಕಾರ್ಯಕರ್ತರಿಗೆ ತಾವು ಬಂದಿರುವ ಬಸ್ ಗಳೆ ಸಿಗುತ್ತಿಲ್ಲ. ಕೆಲವೊಂದು ಕಡೆ ಬಸ್ ಸಿಕ್ಕರೆ ಡ್ರೈವರ್ ಗಳು ಸಿಗುತ್ತಿಲ್ಲ. ನಾನಾ ಕಡೆಗಳಿಂದ ಬಸ್ ಮಾಡಿಕೊಂಡು ಬಂದಿದ್ದರಿಂದ ಕೆಲವರಿಗೆ ಪಾರ್ಕಿಂಗ್ ಸ್ಥಳ ಸಿಗುತ್ತಿಲ್ಲ.ಕೆಲವು ಜಿಲ್ಲೆಗಳಿಂದ ಬಂದಿರುವ ಜನ ನಮ್ಮ ಬಸ್ ಎಲ್ಲಿ ಪಾರ್ಕ್ ಮಾಡಿದ್ದಾರೆ ಎಂದು ಗೊತ್ತಿಲ್ಲ ಅಂತಾ ಗೋಳಾಡುತ್ತಿರುವ ದೃಶ್ಯಗಳು ಕಂಡು ಬಂದವು. ಇತ್ತ ಊಟವು ಸಿಗದೆ, ಬಸ್ ಇಲ್ಲದೇ ಮಹಿಳೆಯರು ಮತ್ತು ವೃದ್ಧರು ರಸ್ತೆಯಲ್ಲಿಯೇ ನಿಂತು ತಮ್ಮ ಊರಿನ ಬಸ್ ಗಾಗಿ ಕಾಯುತ್ತಿದ್ದಾರೆ.Sign in to your account
Username or Email Address


Password

 Remember Me


