ಮೈಸೂರು: ವ್ಯಕ್ತಿಯೊಬ್ಬರನ್ನು ನಡುರಸ್ತೆಯಲ್ಲೇ ಅಪಹರಣ ಮಾಡಿರುವ ಘಟನೆ ಮೈಸೂರಿನ ಕೆ.ಆರ್.ನಗರ ಬಜಾರ್ ರಸ್ತೆಯಲ್ಲಿ ನಡೆದಿದೆ.ನಗರದ ಆಯುರ್ವೇದ ಔಷಧಿ ವೈದ್ಯ ಅಪ್ಸರ್ ಪಾಷ (28) ಅಪಹರಣಕ್ಕೆ ಒಳಗಾದ ವ್ಯಕ್ತಿ. ಬೆಂಗಳೂರು ಮೂಲದ 5 ಮಂದಿ ತಂಡದಿಂದ ಅಪಹರಣ ಶಂಕೆ ವ್ಯಕ್ತವಾಗಿದೆ.ಅಪ್ಸರ್ ಪಾಷ ತಮ್ಮ ಅಕ್ಕನ ಮಗನ ಜೊತೆ ಬಟ್ಟೆ ತರಲು ಹೋದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಸ್ಥಳಕ್ಕೆ ಬಂದ ಐವರ ತಂಡ ಬೆಂಗಳೂರು ನೋಂದಣಿ ಇರುವ ಕಾರಿನಲ್ಲಿ ಇಬ್ಬರನ್ನೂ ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಅಪ್ಸರ್ ಪಾಷ ಅವರ ಜೊತೆಗಿದ್ದ ನದೀಂ ಖಾನ್ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾರೆ. ಅಪಹರಣ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆರೋಪಿಗಳೂ ಅಪ್ಸರ್ ಪಾಷ ರನ್ನು ಏಕೆ? ಅಪಹರಣ ಮಾಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.https://www.youtube.com/watch?v=6azj64IYa0QSign in to your account
Username or Email Address


Password

 Remember Me


