ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಯಲಹಂಕ ನ್ಯೂಟೌನ್ ನ ಕೆಂಪನಹಳ್ಳಿಯಲ್ಲಿ ಬಳಿ ಮೂವರು ಆರೋಪಿಗಳ ಮೇಲೆ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಫೈರಿಂಗ್ ಮಾಡಿದ್ದಾರೆಜನವರಿ 18 ರಂದು ಮಧ್ಯಪ್ರದೇಶ ಮೂಲದ ಸುರೇಶ್, ಆಜಂ ಹಾಗೂ ಜಿತೇಂದರ್ ಕೊಡಿಗೆಹಳ್ಳಿ ಪೇದೆಯಿಂದ ಬಂದೂಕು ಕಸಿದು ಪರಾರಿಯಾಗಿದ್ದರು. ಈ ಪ್ರಕರಣ ಬೆನ್ನತ್ತಿದ್ದ ವಿದ್ಯಾರಣ್ಯಪುರ ಪೊಲೀಸರು ಇತ್ತೀಚೆಗೆ ಮಧ್ಯಪ್ರದೇಶ ಮೂಲದ ಮನೆಗಳ್ಳ ರಾಮಸಿಂಗ್ ನನ್ನು ಬಂಧಿಸಿದ್ದರು.ರಾಮಸಿಂಗ್ ವಿಚಾರಣೆ ವೇಳೆ ಆತ ತನ್ನ ಸಂಗಡಿಗರ ಬಗ್ಗೆ ಬಾಯ್ಬಿಟ್ಟಿದ್ದ. ಹೀಗಾಗಿ ಈತ ನೀಡಿದ ಸುಳಿವಿನ ಆಧಾರದ ಮೇಲೆ ಗುರುವಾರ ರಾತ್ರಿ ಆರೋಪಿಗಳನ್ನ ಹಿಡಿಯಲು ಹೋದಾಗ ಇನ್ಸ್ ಪೆಕ್ಟರ್ ರಾಮಮೂರ್ತಿ ಮೇಲೆ ಹಲ್ಲೆ ಯತ್ನ ನಡೆಯಿತು. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮಧ್ಯಪ್ರದೇಶ ಮೂಲದ ಸುರೇಶ್, ಆಜಂ ಹಾಗೂ ಜಿತೆಂದರ್ ಮೇಲೆ ಮೂರು ಸುತ್ತಿನ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.Sign in to your account
Username or Email Address


Password

 Remember Me


