ಚಿಕ್ಕಮಗಳೂರು: ಮನೆಯಲ್ಲಿ ಮೊಬೈಲ್ ಚಾರ್ಜ್‍ಗೆ ಇಡುವ ಮುನ್ನ ಹುಷಾರ್. ಯಾಕಂದ್ರೆ ಮೊಬೈಲ್ ಚಾರ್ಜರ್ ಕಚ್ಚಿ ನಾಲ್ಕು ವರ್ಷದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.ಅಭಿಷೇಕ ಮೃತ ದುರ್ದೈವಿ ಪುಟಾಣಿ. ಮನೆಯಲ್ಲಿ ಮೊಬೈಲ್ ಚಾರ್ಚಿಂಗ್ ಗೆ ಇಟ್ಟಿದ್ದ ವೇಳೆ ಅಭಿಷೇಕ ಅದರ ವೈಯರನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಪರಿಣಾಮ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.ಗುರುವಾರ ಸುಮಾರು 10.30 ಕ್ಕೆ ಮನೆಯವರು ದಿವಾನ್ ಕಾಟ್ ಮೇಲೆ ಮೊಬೈಲ್ ಚಾರ್ಜ್ ಹಾಕಿದ್ದರು. ಅಲ್ಲೇ ಪಕ್ಕದಲ್ಲಿದ್ದ ಅಭಿಷೇಕ ಆಟವಾಡುತ್ತಾ ಮಲಗಿದ್ದನು. ಬಳಿಕ ಎದ್ದು ಅಲ್ಲೇ ಕಂಡ ಮೊಬೈಲ್ ಚಾರ್ಜರ್ ಜೊತೆ ಆಟವಾಡುತ್ತಾ ಅದರ ವೈಯರನ್ನು ಎತ್ತುಕೊಂಡು ಬಾಯಲ್ಲಿ ಕಚ್ಚಿದ್ದಾನೆ. ತಕ್ಷಣ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ.ಮಗ ಅಭಿಷೇಕ ಕೆಳಗೆ ಬಿದ್ದ ತಕ್ಷಣ ಮನೆಯವರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ ಅಭಿಷೇಕ ಮೃತಪಟ್ಟಿದ್ದಾನೆ.ಈ ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


