ತುಮಕೂರು: ಇಬ್ಬರು ಪ್ರಯಾಣಿಕರು ದಾರಿ ಮಧ್ಯೆ ಇಳಿದಿದ್ದನ್ನು ಕಂಡು ಖಾಸಗಿ ಬಸ್ಸಿನಲ್ಲಿ ಬಾಂಬ್ ಇದೆ ಎಂದು ಇತರೆ ಪ್ರಯಾಣಿಕರು ಭಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.ಬೆಂಗಳೂರಿನಿಂದ ಸಿಂದಗಿಗೆ ಬಸ್ ಹೊರಟಿದ್ದು, ದಾರಿ ಮಧ್ಯೆ ತುಮಕೂರಿನ ಕ್ಯಾತಸಂದ್ರ ಬಳಿ ಇಬ್ಬರು ಪ್ರಯಾಣಿಕರು ಬಸ್‍ನಿಂದ ಇಳಿದ್ದರು. ಇಬ್ಬರು ಪ್ರಯಾಣಿಕರು ಬಸ್ಸಿನಿಂದ ಇಳಿದಿದ್ದನ್ನ ಕಂಡು ಬಾಂಬ್ ಇದೆ ಎಂದು ಇತರೆ ಪ್ರಯಾಣಿಕರು ಭಯಗೊಂಡರು.ಇಬ್ಬರು ಪ್ರಯಾಣಿಕರು ಸಿಂದಗಿಗೆ ಹೋಗಲೆಂದೇ ಬಸ್ ಹತ್ತಿದ್ದರು. ದಾರಿ ಮಧ್ಯೆ ಇಳಿದು ವಾಪಸ್ ಬಾರದೇ ಇದ್ದಾಗ ಇತರೆ ಪ್ರಯಾಣಿಕರು ಅನುಮಾನಗೊಂಡು ಬಾಂಬ್ ಇಟ್ಟಿರಬಹುದು ಎಂದು ತಮಗೆ ತಾವೇ ಅನುಮಾನಗೊಂಡರು.ತುಮಕೂರು ಹೊಸಬಡಾವಣೆ ಠಾಣೆಗೆ ಬಂದು ಪರಿಶೀಲಿಸಿದಾಗ ಪ್ರಯಾಣಿಕರ ಅನುಮಾನಕ್ಕೆ ತೆರೆ ಬಿದಿದ್ದೆ. ಪೊಲೀಸರು ಬಾಂಬ್ ಅನುಮಾನಕ್ಕೆ ತೆರೆ ಎಳೆದ ನಂತರ ಪ್ರಯಾಣಿಕರು ಸುರಕ್ಷಿತವಾಗಿ ಸಿಂದಗಿಯತ್ತ ಹೊರಟರು.Sign in to your account
Username or Email Address


Password

 Remember Me


