ಬೆಂಗಳೂರು: ಬೆತ್ತಲೆ ವಿಡಿಯೋ ಮಾಡಿ ಯುವತಿಯ ಮೇಲೆ ನಿರಂತರ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಹೆಗ್ಗಡದೇವನಪುರ ಗ್ರಾಮದಲ್ಲಿ ನಡೆದಿದೆ.ಆರೋಪಿ ವಿಜಯ್‍ಕುಮಾರ್ ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಬೆತ್ತಲೆ ವಿಡಿಯೋ ಮಾಡಿ 3-4 ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇನೆ. ಆದರೂ ಪೊಲೀಸರು ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಯುವತಿ ಆರೋಪಿಸುತ್ತಿದ್ದಾರೆ.
ನಡೆದಿದ್ದೇನು?: ವಿಜಯ್‍ಕುಮಾರ್ ಮೂಲತಃ ಮಾಗಡಿ ತಾಲೂಕಿನ ಕಣನೂರು ಗ್ರಾಮದ ನಿವಾಸಿ. ವಿಜಯ್ ಈಗಾಗಲೇ ಒಂದು ಮದುವೆಯಾಗಿದ್ದಾನೆ. ಯುವತಿ ಕಣನೂರಿನಲ್ಲಿನ ತನ್ನ ಅಜ್ಜಿ ಮನೆಗೆ ಹೋದಾಗ ಬೆತ್ತಲೆ ವಿಡಿಯೋ ಮಾಡಿದ್ದಾನೆ. ನಂತರ ನಿನ್ನನ್ನು ನಾನು ಲವ್ ಮಾಡುತ್ತಿದ್ದೇನೆ ಎಂದು ನಂಬಿಸಿದ್ದಾನೆ. ನಂತರ ಆ ವಿಡಿಯೋ ಇಟ್ಟುಕೊಂಡು ಅನೇಕ ಬಾರಿ ಅತ್ಯಾಚಾರ ಮಾಡಿದ್ದಾನೆ. ಇದರಿಂದ ನಾನು ಎರಡು ಬಾರಿ ಗರ್ಭಿಣಿಯಾಗಿದ್ದೆ. ಈ ವಿಷಯ ತಿಳಿದು ಆತನೇ ಮಾತ್ರೆಗಳನ್ನ ನೀಡಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ಯುವತಿ ಹೇಳಿದ್ದಾರೆ.ಈ ಬಗ್ಗೆ ಮನೆಯವರಿಗೆ ವಿಷಯ ತಿಳಿಸಿದೆ. ಬಳಿಕ ಗಾಬರಿಗೊಂಡ ಪೋಷಕರು, ವಿಜಯ್ ಕೈಕಾಲು ಹಿಡಿದು ಮದುವೆಯಾಗುವಂತೆ ಕಣ್ಣೀರಿಟ್ಟಿದ್ದಾರೆ. ಆದರೆ ವಿಜಯ್‍ಕುಮಾರ್ ನನ್ನ ಪ್ರೀತಿಯನ್ನ ತಿರಸ್ಕರಿಸಿ ನನಗೂ-ಈಕೆಗೂ ಯಾವುದೇ ಸಂಬಂಧವಿಲ್ಲ, ಪರಿಚಯವೂ ಇಲ್ಲ ಎಂದು ಹೇಳಿ ನಾಪತ್ತೆಯಾಗಿದ್ದಾನೆ ಎಂದು ಸಂತ್ರಸ್ತ ಯುವತಿ ಹೇಳಿದ್ದಾರೆ.ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. ಆದರೆ ಪೊಲೀಸರು ಆರೋಪಿ ವಿಜಯ್‍ಕುಮಾರ್ ಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ನೊಂದ ಯುವತಿ ಹಾಗೂ ಪೋಷಕರು ಆರೋಪಿಸಿದ್ದಾರೆ.








 Advertisement 




Sign in to your account
Username or Email Address


Password

 Remember Me


