ಬಳ್ಳಾರಿ: ಸಂಸದ ಶ್ರೀರಾಮುಲು ಅವರಿಗೆ ವಿಶ್ವದ ದೊಡ್ಡಣ್ಣ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ.130 ರಾಷ್ಟ್ರಗಳ ಗಣ್ಯರಿಗೆ ಆಹ್ವಾನ ನೀಡಿರುವ ಟ್ರಂಪ್ ಅವರು, ಭಾರತದಿಂದ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನಾವಿಸ್ ಗೂ ಆಹ್ವಾನವಿಟ್ಟಿದ್ದಾರೆ.ಒಕ್ಕೂಟ ವ್ಯವಸ್ಥೆಯ ರಾಷ್ಟ್ರಗಳ ಗಣ್ಯರಿಗೆ ಪ್ರತಿ ವರ್ಷ ಔತಣಕೂಟ ಹಾಗೂ ಶಾಂತಿ ಸ್ಥಾಪನೆ ಬಗ್ಗೆ ನಡೆಯೋ ಚರ್ಚೆಗೆ ತಮ್ಮನ್ನೂ ಆಹ್ವಾನಿಸಿರುವುದು ನನ್ನ ಪುಣ್ಯವೆಂದು ಶ್ರೀರಾಮುಲು ಬಣ್ಣಿಸಿದ್ದಾರೆ. ಅಲ್ಲದೇ ಫೆಬ್ರವರಿ 7,8 ರಂದು ಅಮೆರಿಕಾಕ್ಕೆ ಹೋಗಬೇಕಾಗಿದೆ. ಆದ್ರೆ ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ಬಿಜೆಪಿ ಸಂಸದರಿಗೆ ವಿಪ್ ಜಾರಿಯಾಗಿರುವುದರಿಂದ ತಾವೂ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಅಮೆರಿಕಾಕ್ಕೆ ತೆರಳುವ ಬಗ್ಗೆ ತೀರ್ಮಾನ ಕೈಗೊಳ್ಳುವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.ಈಗಾಗಲೇ ಅಮೆರಿಕಾಕ್ಕೆ ತೆರಳಲು ಸಿದ್ಧತೆ ಹಾಗೂ ವೀಸಾ ಸಿದ್ಧಪಡಿಸಿಕೊಂಡಿರುವ ಶ್ರೀರಾಮುಲುಗೆ ಪಕ್ಷದ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ರೆ ಭಾರತದ ಪರವಾಗಿ ಅಮೆರಿಕಾದ ಅಧ್ಯಕ್ಷರ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.Sign in to your account
Username or Email Address


Password

 Remember Me


