ಬೆಂಗಳೂರು: ಬಂಟಿಗ್ಸ್ ಜಗಳಕ್ಕೆ ಜೆಸಿ ನಗರದ ನಂದಿದುರ್ಗಾ ರಸ್ತೆಯ ಚಿನ್ನಪ್ಪ ಗಾರ್ಡನ್ ಬಳಿ ಸಂತೋಷ್ ಕೊಲೆಯಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.ಕೊಲೆ ಸಂಖ್ಯೆ 23. ಫೆಬ್ರವರಿ 4 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಮೋದಿ ಬರುತ್ತಾರೆ. ಇದರಿಂದ ಸಂತೋಷ್ ಏರಿಯಾದಲ್ಲಿ ಬಂಟಿಂಗ್ಸ್ ಹಾಕಲು ಮುಂದಾಗಿದ್ದರು. ಈ ವಿಚಾರವಾಗಿ ವಾಸೀಮ್ ಹಾಗೂ ಸಂತೋಷ್ ನಡುವೆ ಗಲಾಟೆ ನಡೆದಿತ್ತು. ಆದರೆ ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.ಜೆ.ಸಿ. ನಗರದ ನಿವಾಸಿಯಾಗಿರೋ 28 ವರ್ಷದ ಸಂತೋಷ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಬಿಜೆಪಿ ಪರ ಓಡಾಡಿಕೊಂಡಿದ್ದರು. ಬುಧವಾರ ರಾತ್ರಿ ಸುಮಾರು 7:30 ರಲ್ಲಿ ಹೊತ್ತಿಗೆ ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಅದೇ ಏರಿಯಾದ ವಾಸೀಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬವರು ಕೂಡ ಅಲ್ಲೇ ಟೀ ಕುಡಿಯುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ವಾಸೀಮ್ ಎಂಬಾತ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸದ್ಯ ಪ್ರಕರಣ ಸಂಬಂಧ ವಸೀಂ, ಫಿಲಿಪ್ಸ್ ಎಂಬ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಠಾಣೆಯೆದುರು ಪ್ರತಿಭಟನೆ ಸಹ ನಡೆಸಿದ್ದಾರೆ. ಸಂತೋಷ್ ಹತ್ಯೆ ರಾಜಕೀಯ ಪ್ರೇರಿತ ಕೊಲೆ ಅಂತ ಆರೋಪಿಸಿದ್ದು, ವಸೀಂ ಸ್ಥಳೀಯ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರ ಮಗ, ಅವನಿಗೂ ಬಿಜೆಪಿಗೂ ಆಗುತ್ತಿರಲಿಲ್ಲ. ಹಾಗಾಗಿ ಬಿಜೆಪಿಯ ಪರ ಓಡಾಡುತ್ತಿದ್ದ ಸಂತೋಷ್‍ನನ್ನ ಕೊಲೆಗೈಯ್ಯಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.Murder numb 23: Santhosh, a 28 year old BJP worker, was hacked to death today late evening by one Wasim & group at JC Nagar in Bengaluru. Santhosh's fault? He was tying flags & buntings of the party for the February 4th rally. pic.twitter.com/jrsn7ZEPdf— Pratap Simha (@mepratap) January 31, 2018






 Advertisement 




Sign in to your account
Username or Email Address


Password

 Remember Me


