ಬೆಂಗಳೂರು: 13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕ್ರಿಕೆಟ್ ಕೋಚ್ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಗರದ ಯಲಹಂಕದಲ್ಲಿ ನಡೆದಿದೆ.ಆರೋಪಿ ಕ್ರಿಕೆಟ್ ಕೋಚ್ ನನ್ನು ನಾಸೀರ್ ಎಂದು ಗುರುತಿಸಿದ್ದು, ಇದೀಗ ಈತನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. 3 ದಿನಗಳ ಹಿಂದೆ ಕೋಚ್ ನಾಸೀರ್ ಬಾಲಕ ತರಬೇತಿ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ಜಿಕೆವಿಕೆ ಆವರಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.ಆರೋಪಿ ಪೊದೆಯೊಂದರ ಬಳಿ ತಬ್ಬಿಕೊಳ್ಳಲು ಮುಂದಾಗಿ ಬಾಲಕನ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ನಂತರ ಕೋಚ್‍ನಿಂದ ತಪ್ಪಿಸಿಕೊಂಡ ಬಾಲಕ ಭಯದಿಂದ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ರಾತ್ರಿ ಊಟಕ್ಕೂ ಬರಲಿಲ್ಲ. ಇದರಿಂದ ಪೋಷಕರು ಮಗನನ್ನು ಕರೆದು ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಅರ್ಧ ಗಂಟೆಯಲ್ಲಿ ಆರೋಪಿ ನಾಸೀರ್‍ನನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ.Sign in to your account
Username or Email Address


Password

 Remember Me


