ಮಂಗಳೂರು: ಹೆಣ್ಣುಮಕ್ಕಳನ್ನು ಚುಡಾಯಿಸಿದ ವೃದ್ಧನೊಬ್ಬನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕರು ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಮಂಗಳೂರಿನ ಬೆಂಗ್ರೇಯಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ವೃದ್ಧನೊಬ್ಬ ಸ್ಥಳೀಯ ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದನು. ವೃದ್ಧನ ಈ ಅನಾಚಾರವನ್ನು ಸಹಿಸದ ಸ್ಥಳೀಯರು ಆತನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಬಳಿಕ ಚೆನ್ನಾಗಿ ಥಳಿಸಿದ್ದಾರೆ.ಹೆಣ್ಣು ಮಕ್ಕಳ ಹೆತ್ತವರು ವೃದ್ಧನಿಗೆ ಯದ್ವಾತದ್ವ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೃದ್ಧನಿಗೆ ಧರ್ಮದೇಟು ಬೀಳುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಖತ್ ವೈರಲ್ ಆಗಿದ್ದು, ಚಪಲ ತೀರದ ವೃದ್ಧನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


