ಬೆಂಗಳೂರು: ಜೆಡಿಎಸ್ ನಲ್ಲಿ ಟಿಕೆಟ್ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದ್ದು, ಈಗಾಗಲೇ ಪಕ್ಷದ ರಾಷ್ಟ್ರಧ್ಯಕ್ಷರು ಪಟ್ಟಿಯನ್ನು ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.ಫೆಬ್ರವರಿ 17ಕ್ಕೆ ಜೆಡಿಎಸ್ ವರಿಷ್ಠರು ಅಭ್ಯರ್ಥಿಗಳ ಪಟ್ಟಿಗೆ ಬಿಡುಗಡೆ ಮಾಡಲು ದಿನಾಂಕ ಫಿಗ್ಗ ಮಾಡಿದ್ದು, ದೊಡ್ಡಗೌಡರು ಕೂಡ ಹಸಿರುನಿಶಾನೆ ಕೊಟ್ಟಿದ್ದಾರೆ ಅಂತ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲಿ 150 ಮಂದಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಎಲೆಕ್ಷನ್‍ಗೆ ನಾವು ರೆಡಿ, ನಮ್ಮ ಪಾರ್ಟಿಯೂ ರೆಡಿ ಅಂತ ಜೆಡಿಎಸ್ ಹೇಳಲು ಹೊರಟಿದೆ. ಎರಡನೇ ಪಟ್ಟಿಯನ್ನು ಯಾವಾಗ ಬಿಡುಗಡೆ ಮಾಡಲಾಗುತ್ತಿದೆ ಜೆಡಿಎಸ್ ಖಚಿತ ಪಡಿಸಿಲ್ಲ.ಮಧ್ಯ ಕರ್ನಾಟಕ ಅಂದ್ರೆ ದಾವಣಗೆರೆ ಅಥವಾ ಬೆಂಗಳೂರಿನಲ್ಲಿ ದೊಡ್ಡದಾದ ಸಮಾರಂಭ ಆಯೋಜಿಸಿ ಪಟ್ಟಿ ಬಿಡುಗಡೆ ಮಾಡಲು ಜೆಡಿಎಸ್ ಚಿಂತನೆ ನಡೆಸಿದೆ. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ ದೊಡ್ಡ ಸಮಾರಂಭದಲ್ಲಿ ಮತದಾರರನ ಮುಂದೆ ಅಭ್ಯರ್ಥಿಗಳ ಪ್ರಮಾಣ ಮಾಡಿಸುವ ಕರ್ನಾಟಕ ರಾಜಕೀಯದಲ್ಲಿ ಹೊಸ ಪ್ರಯತ್ನದತ್ತ ಜೆಡಿಎಸ್ ಹೆಜ್ಜೆ ಹಾಕಲಿದೆ. ಭ್ರಷ್ಟಾಚಾರ ಮಾಡೋಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಅಭ್ಯರ್ಥಿಗಳು ಸಮಾರಂಭದಲ್ಲಿ ಪ್ರಮಾಣ ಮಾಡಬೇಕಿದೆ.Sign in to your account
Username or Email Address


Password

 Remember Me


