ಬಳ್ಳಾರಿ: ರಾಜ್ಯದ ಜನತೆಗೆ ಭಾಗ್ಯಗಳ ಮೇಲೆ ಭಾಗ್ಯಗಳನ್ನ ನೀಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಮತ್ತೊಂದು ಹೊಸ ಭ್ಯಾಗ್ಯವನ್ನ ನೀಡಲು ಮುಂದಾಗಿದೆ. ಇನ್ನು ಮುಂದೆ ಬಿಪಿ.ಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಗಳಿಗೆ ಕಂಬಳಿ ಭಾಗ್ಯ ದೊರೆಯಲಿದೆ.ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಹಾಲಮತ ಅಧ್ಯಯನ ಪೀಠದ ದಶಮಾನೋತ್ಸವ ಸಮಾರಂಭದಲ್ಲಿ ಭಾಗಿಯಾದ ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಈ ವಿಷಯವನ್ನ ಬಹಿಂಗಪಡಿಸಿದ್ದಾರೆ.ಕ್ಯಾಬಿನೆಟ್ ನಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಕಂಬಳಿ ತಯಾರಿಕೆಯ ಮೇಲೆ ಅವಲಂಬನೆಯಾಗಿರುವ ಕುಟುಂಬಗಳು ಸಂಕಷ್ಟದಲ್ಲಿದ್ದು, ಈ ಯೋಜನೆ ಜಾರಿಯಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಲ್ಲದೆ ಕಂಬಳಿ ಬಳಕೆ ಮಾಡುವುದರಿಂದ ಮನುಷ್ಯ ಚಳಿ, ಮಳೆ, ಗಾಳಿಯಿಂದ ರಕ್ಷಣೆ ಪಡೆಯಬಹುದೆಂದು ತಿಳಿಸಿದ್ರು.






 Advertisement 




Sign in to your account
Username or Email Address


Password

 Remember Me


