ಮೈಸೂರು: ಸ್ವಚ್ಛ ಮೈಸೂರು ಪಟ್ಟಕ್ಕಾಗಿ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಯಾನ ಆರಂಭಿಸಿದ್ದಾರೆ.ಸಾಮಾಜಿಕ ಜಾಲತಾಣದ ಮೂಲಕ ಯದುವೀರ್ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಭಾಗಿಯಾಗುವಂತೆ ಮೈಸೂರಿಗರಲ್ಲಿ ಮನವಿ ಮಾಡುತ್ತಿದ್ದಾರೆ. ಫೇಸ್‍ಬುಕ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ವಿಶೇಷ ವಿಡಿಯೋಗಳನ್ನು ತನ್ನದೇ ಅಕೌಂಟ್‍ನಿಂದ ಅಪ್‍ಲೋಡ್ ಮಾಡಿ, ಸ್ವಚ್ಛ ಅಭಿಯಾನದಲ್ಲಿ ಯಾವ ರೀತಿ ಭಾಗಿಯಾಗಬೇಕೆಂದು ತಿಳಿಸುತ್ತಿದ್ದಾರೆ.ಸ್ವಚ್ಛತಾ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಸರ್ವೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡುತ್ತಿದ್ದು ಈ ಮೂಲಕ ಈ ಬಾರಿ ನಂ.1 ಪಟ್ಟಕ್ಕಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಯದುವೀರ್ ಸ್ವಚ್ಛ ಮೈಸೂರು ರಾಯಭಾರಿಯಾಗಿದ್ದಾರೆ.Sign in to your account
Username or Email Address


Password

 Remember Me


