ತುಮಕೂರು: ಮತ ಬೇಟೆಗಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಕಸರತ್ತು ಮುಂದುವರೆದಿದೆ. ಕೊರಟಗೆರೆ ಕ್ಷೇತ್ರದ ಕೋಳಾಲ ಹೋಬಳಿಯ ಎನ್.ಬೇವಿನಹಳ್ಳಿಯಲ್ಲಿ ಪರಮೇಶ್ವರ್ ಗ್ರಾಮ ವಾಸ್ತವ್ಯ ಮಾಡಿದ್ದಾರೆ.ಗ್ರಾಮವಾಸ್ತವ್ಯ ಪರಿಕಲ್ಪನೆ ಸಮಾಜಮುಖಿಯಾಗಿದೆ. ಗ್ರಾಮವಾಸ್ತವ್ಯದಿಂದ ಗ್ರಾಮದ ಸಮಸ್ಯೆ, ಹಳ್ಳಿ ಜನರ ಕಷ್ಟನಷ್ಟ ತಿಳಿಯುತ್ತದೆ. ಹೀಗಾಗಿ ಮುಂದಿನ ದಿನದಲ್ಲಿ ಪಕ್ಷದ ಎಲ್ಲಾ ಶಾಸಕರಿಗೂ ಗ್ರಾಮವಾಸ್ತವ್ಯ ಮಾಡುವಂತೆ ಫರ್ಮಾನು ಹೊರಡಿಸಲಾಗುವುದು ಎಂದರು. ಎನ್.ಬೇವಿನಹಳ್ಳಿ ಗ್ರಾಮದ ರೈತ ರಂಗಧಾಮಯ್ಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಪರಮೇಶ್ವರ್ ಮುದ್ದೆ ಊಟ ಸೇವಿಸಿದ್ರು. ಬಳಿಕ ನೆಲದ ಮೇಲೆ ಚಾಪೆ ಹಾಸಿ ಮಲಗಿದ್ರು.ಬಿಜೆಪಿ ಒಳಂಗಿಂದೊಳಗೆ ಓವೈಸಿ ಜೊತೆ ಮಾತುಕತೆ ನಡೆಸುತಿರುವುದು ನಮಗೆ ಮೊದಲೇ ಗೊತ್ತಿತ್ತು. ಮುಸ್ಲಿಂರನ್ನು ದ್ವೇಷಿಸುವ ಬಿಜೆಪಿ ಓವೈಸಿ ಸಖ್ಯ ಬೆಳೆಸಿದೆ. ಅವರಿಗೆ ನೈತಿಕತೆಯೇ ಇಲ್ಲ ಎಂದುಪರಮೇಶ್ವರ್ ಬಿಜೆಪಿ ವಿರುದ್ಧ ಹರಿಹಾಯ್ದರು.Sign in to your account
Username or Email Address


Password

 Remember Me


