ಮಂಗಳೂರು: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕುವ ಮೂಲಕ ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡಲು ಯತ್ನಿಸಲಾಗಿದೆ.`ಟ್ರು ಮೀಡಿಯಾ ನೆಟ್ ವರ್ಕ್ ಫೇಸ್ ಬುಕ್’ ಪೇಜ್ ನಲ್ಲಿ ಪ್ರಭಾಕರ್ ಭಟ್ ಅವರ ಫೋಟೋ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.ಫೋಸ್ಟ್ ನಲ್ಲಿ ಏನಿದೆ?: “ಕಲ್ಲಡ್ಕದಲ್ಲಿ ಮುದುಕ ಭಯೋತ್ಪಾದಕ ಹಿಜಿಡಾ ಭಟ್ಟನಿಂದ ಪ್ಯಾಂಟ್ ಹಾಕಿ ಟ್ರೈನಿಂಗ್”, “ಮಂಗನಿಂದ ಮಾನವ ಸಾಬೀತುಪಡಿಸಿದ ಭಟ್ಟ”, “ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ” ಎಂದು ಭಟ್ ಫೋಟೋ ಹಾಕಿ ನಿಂದನೆ ಮಾಡಲಾಗಿದೆ. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ: ಮಂಗಳೂರು ಮುಸ್ಲಿಮ್ಸ್ ಪೇಜ್ಭಟ್ ಅವರ ಯೋಗಾಸನ, ದಂಡ ವ್ಯಾಯಾಮದ ಫೋಟೋ ಜತೆ ನಾಯಿ ಫೋಟೋ ಸೇರಿಸಿ ಅವಮಾನ ಮಾಡಲಾಗಿದೆ. ಒಟ್ಟಿನಲ್ಲಿ ಟ್ರು ಮೀಡಿಯಾ ನೆಟ್‍ವರ್ಕ್ ಪೇಜ್ ಅಡ್ಮಿನ್‍ನಿಂದ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡಲು ಯತ್ನ ನಡೆಯುತ್ತಿದೆ.ಭಾನುವಾರ ಕಲ್ಲಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಆರ್ ಎಸ್‍ಎಸ್‍ನ ನೂತನ ಸಮವಸ್ತ್ರದೊಂದಿಗೆ ಗಣವೇಷಧಾರಿಯಾಗಿ ಕಾಣುತ್ತಿದ್ದರು.ಈ ಹಿಂದೆಯೂ “ಆರ್ ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇಂದು ಕೊನೆಯ ದಿನ” ಎಂದು ಮಂಗಳೂರು ಮುಸ್ಲಿಮ್ ಹೆಸರಿನಲ್ಲಿರುವ ಫೇಸ್‍ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಲಾಗಿತ್ತು.  Sign in to your account
Username or Email Address


Password

 Remember Me


