ತುಮಕೂರು: ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಜೆಡಿಎಸ್‍ನ ಯುವ ಸಾರಥಿ ಪ್ರಜ್ವಲ್ ರೇವಣ್ಣ, ತಮ್ಮ ಮಾತಿನ ಭರದಲ್ಲಿ ಹೇಳಿಕೆಯೊಂದನ್ನು ನೀಡಿ ಚರ್ಚೆಗೆ ಗ್ರಾಸರಾಗಿದ್ದಾರೆ.ತುಮಕೂರು ಜಿಲ್ಲೆ ತಿಪಟೂರಿನ ನೊಣವಿನಕೆರೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ, ಮುಂದೆ ದೇವೆಗೌಡರ ಆಳ್ವಿಕೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಹಾಗಾದ್ರೆ ನೆಪಮಾತ್ರಕ್ಕೆ ಕುಮಾರಸ್ವಾಮಿ ಸಿಎಂ ಆಗ್ತಾರಾ..? ಆಡಳಿತ ಎಲ್ಲವೂ ದೇವೇಗೌಡರು ಬಯಸಿದಂತೆ ನಡೆಯುತ್ತಾ..? ಎನ್ನುವ ಚರ್ಚೆಗೆ ಪ್ರಜ್ವಲ್ ಮಾತುಗಳು ಎಡೆಮಾಡಿಕೊಟ್ಟಿದೆ.ಇದೂವರೆಗೂ ಹಳ್ಳಿಯಿಂದ ಹೋದವರೇ ದಿಲ್ಲಿ ಆಳೋರು, ಸಾಧನೆ ಮಾಡಿರುವುದು. ಸಿಟಿಯಿಂದ ದಿಲ್ಲಿ ಹೋದವರ ಉದಾಹರಣೆಗಳು ನಮ್ಮ ಮುಂದಿಲ್ಲ. ಹಳ್ಳಿಯ ಜನ ಮನಸ್ಸು ಮಾಡಿದ್ರೆ ದಿಲ್ಲಿಗೂ, ಅಮೆರಿಕಾಗೂ ಹೋಗುತ್ತಾರೆ. ಜನಪರ ಸರ್ಕಾರಕ್ಕಾಗಿ ಈ ಬಾರಿ ರೈತರು, ಯುವಕರು ಜೆಡಿಎಸ್ ಕೈ ಹಿಡಿಯಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.Sign in to your account
Username or Email Address


Password

 Remember Me


