ಬೆಂಗಳೂರು: ಪಕ್ಷಿಯೊಂದನ್ನು ರಕ್ಷಿಸಲು ಹೋಗಿ ಯುವಕ ಮರದಿಂದ ಕೆಳಗೆ ಬಿದ್ದು ಅಸ್ವಸ್ಥಗೊಂಡ ಘಟನೆ ನಗರದ ಲಾಲ್ ಬಾಗ್ ಬಳಿ ನಡೆದಿದೆ.ಸದ್ಯ ಘಟನೆಯಲ್ಲಿ ಗಾಯಗೊಂಡ ಯುವಕನನ್ನು ಅಗ್ನಿಶಾಮಕ ದಳದ ವಾಹನದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಏನಿದು ಘಟನೆ?: ಲಾಲ್ ಬಾಗ್ ಸಮೀಪದ ಮರವೊಂದರಲ್ಲಿ ಗಾಳಿಪಟದ ದಾರಕ್ಕೆ ಹದ್ದೊಂದು ಸಿಲುಕಿ ಒದ್ದಾಡುತ್ತಿತ್ತು. ಈ ಪಕ್ಷಿಯನ್ನ ಉಳಿಸಲು ಪಕ್ಷಿ ಪ್ರೇಮಿಗಳು ಶತಪ್ರಯತ್ನ ಮಾಡಿದ್ದರು. ಅಂತೆಯೇ ಇದನ್ನು ಗಮನಿಸಿದ ಯುವಕ ಆ ಹದ್ದನ್ನು ರಕ್ಷಿಸಲೆಂದು ಮರ ಏರಿದ್ದಾನೆ. ಆದ್ರೆ ಸುಮಾರು 25 ಅಡಿ ಎತ್ತರದಿಂದ ಆಯತಪ್ಪಿ ಕೆಳಗೆಬಿದ್ದು ಅಸ್ವಸ್ಥಗೊಂಡಿದ್ದಾನೆ.ಸದ್ಯ ಹದ್ದನ್ನು ರಕ್ಷಿಸಲಾಗಿದ್ದು, ಯುವಕ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.






 Advertisement 




Sign in to your account
Username or Email Address


Password

 Remember Me


