ಕೋಲಾರ: ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮೂವರು ಸಾವನ್ನಪಿರುವ ಘಟನೆ ಜಿಲ್ಲೆಯ ಆಂಧ್ರ ಗಡಿ ಚಿತ್ತೂರು ಜಿಲ್ಲೆಯ ಶಾಂತಿಪುರಂ ಬಳಿ ನಡೆದಿದೆ.ಗುಡಪಲ್ಲಿ ಬಳಿಯ ಅಗರಂ ಮೂಲದ ನಾರಾಯಣಮ್ಮ(40), ಮಮತ(24), 2 ವರ್ಷದ ಯಶ್ವಂತಿ ಮೃತ ದುರ್ದೈವಿಗಳು. ಅಪಘಾತದಲ್ಲಿ ರಾಜಪ್ಪ ಗಂಭೀರ ಗಾಯಗೊಂಡಿದ್ದು, ಅವರನ್ನು ಸಮೀಪದ ಕುಪ್ಪಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ನಾಲ್ವರು ಒಂದೇ ಬೈಕಿನಲ್ಲಿ ಶಾಂತಿಪುರಂನಿಂದ ಕುಪ್ಪಂ ಹೋಗುತ್ತಿದ್ದರು. ಇವರ ವಿರುದ್ಧ ದಿಕ್ಕಿನಿಂದ ಲಾರಿಯೊಂದು ಕುಪ್ಪಂ ಕಡೆಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ರಾಚಪ್ಪ ಬೈಕಿನ ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಮಗು ಮತ್ತು ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ರಾಜಪ್ಪ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆ ಸಂಬಂಧ ರಾಳ್ಳ ಬೂದಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಂತರ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಅಪಘಾತದಿಂದ ಸಾರ್ವಜನಿಕರು ಉದ್ರಿಕ್ತಗೊಂಡು ರತ್ನ ಮಿನರಲ್ಸ್ ಕ್ವಾರಿ ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಜೊತೆಗೆ ಲಾರಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.Sign in to your account
Username or Email Address


Password

 Remember Me


