ಬೆಂಗಳೂರು: ಶತಶತಮಾನಗಳಿಂದ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದಾರೆ. ನಮ್ಮ ಇಡೀ ಊರಿನಲ್ಲಿ ಲಾಯರ್ (Lawyer) ಆದವನು ನಾನು ಒಬ್ಬನೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಶಿಕ್ಷಣದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.ಕಾಳಿದಾಸ ಹೆಲ್ತ್ ಆಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಸಂತ ನಗರದ ದೇವರಾಜ್ ಅರಸ ಭವನದಲ್ಲಿ ನಡೆದ ಪ್ರೇರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಸಿಎಂ, ನಮ್ಮ ಊರಲ್ಲಿ ಪದವೀಧರರು ಇದ್ದರು. ಆದರೆ ಲಾಯರ್ ಆಗಿದ್ದು ನಾನೇ. ನಮ್ಮ ಅಪ್ಪ ನಮ್ಮೂರು ಶಾನುಭೋಗರ ಮಾತು ಕೇಳುತ್ತಿದ್ದರು. ನನಗೆ ಎಂಎಸ್‌ಸಿ ಸೀಟು ಸಿಗಲಿಲ್ಲ. ಆಮೇಲೆ ವ್ಯವಸಾಯ ಮಾಡುತ್ತಿದ್ದೆ. ಅದಾದ ಬಳಿಕ ಲಾ ಓದೋಕೆ ಹೋಗಿದ್ದೆ ಎಂದು ತಿಳಿಸಿದರು.ನಮ್ಮ ಅಪ್ಪನಿಗೆ ನಾನು ಲಾ ಮಾಡ್ತೀನಿ ಅಂತ ಹೇಳಿದ್ದೆ. ಆಗ ಅವರು ಶಾನುಭೋಗರ ಹತ್ತಿರ ಹೋಗಿ ಕೇಳಿದ್ದರು. ಆಗ ಶಾನುಭೋಗರು ಕುರುಬರು ಲಾಯರ್ ಕೆಲಸ ಮಾಡೋಕೆ ಆಗುತ್ತಾ? ಬೇಡ ಎಂದು ಹೇಳಿದ್ದರು. ಅವರ ಮಾತು ಕೇಳಿ ನಮ್ಮ ಅಪ್ಪ ನನಗೆ ಲಾಯರ್ ಮಾಡಬೇಡ ಎಂದು ಹೇಳಿದ್ರು. ಆದರೂ ಕೂಡಾ ನಾನು ಲಾಯರ್ ಓದಿದೆ. ಬಳಿಕ ಶಾನುಭೋಗರ ಆಸ್ತಿ ವಿಚಾರಕ್ಕೆ ನಾನೇ ಲಾಯರ್ ಆದೆ. ಆಗ ಶಾನುಭೋಗರು ಏನು ಮಾತಾಡದೇ ಸುಮ್ಮನೆ ಆದರು ಎಂದು ಸಿಎಂ ತಮ್ಮ ಲಾ ಜೀವನದ ಇತಿಹಾಸ ಬಿಚ್ಚಿಟ್ಟರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯನಾನು ಎವರೇಜ್ ಸ್ಟೂಡೆಂಟ್. ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸ್, ಪಿಯುಸಿ ಬಂದ ಮೇಲೆ ಸೆಕೆಂಡ್ ಕ್ಲಾಸ್. ಡಿಗ್ರಿ ಬಂದ ಮೇಲೆ ಎವರೇಜ್ ಸ್ಟೂಡೆಂಟ್ ಆಗಿದ್ದೆ. ಆದರು ನಾನು ಇವತ್ತು ಸಿಎಂ ಆಗಿದ್ದೇನೆ. ಜೀವನದಲ್ಲಿ ಶ್ರಮ ಮುಖ್ಯ ಎಂದು ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಕರ್ನಾಟಕಕ್ಕೆ ಗ್ರಹಣ- ಬಿಜೆಪಿ ವ್ಯಂಗ್ಯWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


