ಬೆಂಗಳೂರು: ಮಗ ಸುಳ್ಳು ಹೇಳುತ್ತಾನೆಂದು ಸಿಟ್ಟುಗೊಂಡ ಕ್ರೂರ ತಂದೆ ಆತನಿಗೆ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ಸಮೀಪ ನಡೆದಿದೆ.ತಂದೆ ಕೈನಲ್ಲಿ ಹೊಡೆಯುವುದಲ್ಲದೆ ಕಾಲಿನಿಂದ ತುಳಿದು ತನ್ನ ವಿಕೃತಿ ಮೆರೆದಿದ್ದಾನೆ. ಬಾಲಕ ಸುಳ್ಳು ಹೇಳಿಲ್ಲ ಎಂದು ಹೇಳುತ್ತಿದ್ದರೂ ಬಿಡದೇ ಚೆಂಡಿನಂತೆ ಬಿಸಾಡಿದ್ದಾನೆ. ಎಷ್ಟು ಸಲ ಸುಳ್ಳು ಹೇಳುತ್ತೀಯಾ ಎಂದು ತಂದೆ ಬೆಲ್ಟ್ ನಲ್ಲಿ ಹೊಡೆದಿದ್ದಾನೆ. ಮಗ ಪದೇ ಪದೇ ಸುಳ್ಳು ಹೇಳ್ತಾನೆ ಎಂದು ತಂದೆ ಕಾಲಿನಲ್ಲಿ ಒದ್ದು, ವಿಕೃತವಾಗಿ ಹಲ್ಲೆ ನಡೆಸಿದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಒಟ್ಟಿನಲ್ಲಿ ಬಾಲಕ ತಾನು ತಪ್ಪು ಮಾಡಿಲ್ಲ ಅಂತ ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ತಂದೆ ತನ್ನ ಮಗನ ಮೇಲೆಯೇ ರೌದ್ರಾವತಾರ ತಾಳಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ತಂದೆಯ ಈ ಕ್ರೂರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.https://www.youtube.com/watch?v=j-PFEhOIDncSign in to your account
Username or Email Address


Password

 Remember Me


