ಬಾಗಲಕೋಟೆ: ಕೆಎಸ್‍ಆರ್‍ಟಿಸಿ ಬಸ್ ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯೊಬ್ಬರ ಕಾರ್ ಡಿಕ್ಕಿ ಹೊಡೆದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ನಡೆದಿದೆ.ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ಹಾಗೂ ಬಾಗಲಕೋಟೆ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಕಾರ್ ಇಳಕಲ್ ನಗರದಿಂದ ಬಾಗಲಕೋಟೆ ಮಾರ್ಗದಿಂದ ಬರುವಾಗ ಹಿಂಬದಿಯಿಂದ ಬಸ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಜಿ.ಪಂ ಅಧ್ಯಕ್ಷೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಲು ಹೋಗುವಾಗ ಈ ಅಪಘಾತ ಸಂಭವಿಸಿದ್ದು, ಕಾರಿನ ಹೆಡ್ ಲೈಟ್ ಜಖಂಗೊಂಡಿದೆ. ಅಪಘಾತದ ಬಳಿಕ ಅಧ್ಯಕ್ಷೆ ಬೇರೆ ಕಾರಿನಲ್ಲಿ ಬಾಗಲಕೋಟೆಗೆ ತಲುಪಿದ್ದಾರೆ.Sign in to your account
Username or Email Address


Password

 Remember Me


