ಕೊಪ್ಪಳ: 69ನೇ ಗಣರಾಜ್ಯೋತ್ಸವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತಿದೆ. ಆದರೆ ಈ ಜಿಲ್ಲೆಯಲ್ಲಿ ಆರಂಭದ ಮೊದಲೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿಕೊಂಡಿದೆ.ಜಿಲ್ಲೆಯ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಈ ಎಡವಟ್ಟು ಮಾಡಿಕೊಂಡಿದ್ದು, ಧ್ವಜವನ್ನು ಉಲ್ಟವಾಗಿ ಹಾರಿಸಲಾಗಿದೆ. ದೇಶದ ಎಲ್ಲಾ ಭಾಗದಲ್ಲೂ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರದ ಹಿರಿಮೆಯ ಪ್ರತೀಕವಾಗಿ ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜವನ್ನು ಶ್ಲಾಘಿಸಲಾಗುತ್ತದೆ. ಆದರೆ ಈ ಕಾಲೇಜಿನಲ್ಲಿ ಪ್ರಾಚಾರ್ಯ ನಿರ್ಲಕ್ಷ್ಯದಿಂದ ಧ್ವಜವನ್ನು ಉಲ್ಟಾ ಹಾರಿಸಿದ್ದಾರೆ.ಗಣರಾಜ್ಯೋತ್ಸವ ದಿನದಂದೇ ತಲೆಕೆಳಗಾಗಿ ಧ್ವಜಾರೋಹಣ ಮಾಡಿದ್ದರಿಂದ ರಾಷ್ಟ್ರ ಧ್ವಜ್ಕಕೆ ಅಪಮಾನ ಮಾಡಿದಂತಾಗಿದೆ. ಆದರೆ ತಕ್ಷಣ ಮತ್ತೆ ಧ್ವಜವನ್ನು ಸರಿ ಮಾಡಿ ಉಪನ್ಯಾಸಕರು ದ್ವಜಾರೋಹಣ ನೇರವೇರಿಸಿದ್ದಾರೆ.Sign in to your account
Username or Email Address


Password

 Remember Me


