ಬೆಂಗಳೂರು: ಕರ್ನಾಟಕ ಬಂದ್ ಬಹುತೇಕ ಅಂತ್ಯಗೊಂಡಿದೆ. ಬಂದ್‍ನ ಪರಿಣಾಮ ನಿನ್ನೆ ರಾತ್ರಿಯಿಂದ ನಿಂತಿದ್ದ ಬಸ್ಸುಗಳ ಸಂಚಾರ ಪ್ರಾರಂಭವಾಗಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳ ಓಡಾಟ ಶುರುವಾಗಿರೋ ಹಿನ್ನೆಲೆಯಲ್ಲಿ ಕರ್ನಾಟಕ ಸಹಜ ಸ್ಥಿತಿಯತ್ತ ತೆರಳುತ್ತಿದೆ.ಬೆಳಗ್ಗೆ 6 ಗಂಟೆಯಿಂದ ಸ್ಥಗಿತಗೊಂಡಿದ್ದ ಬಸ್‍ಗಳ ಸಂಚಾರ ಇದೀಗ ಆರಂಭವಾಗಿದೆ. ಮೆಜೆಸ್ಟಿಕ್ ಸೇರಿದಂತೆ ವಿವಿಧ ಡಿಪೋಗಳಿಂದ ಬಸ್‍ಗಳು ಹೊರಡುತ್ತಿವೆ. ಡಿಪೋ ಗಳಿಂದ ಈಗಾಗಲೇ ಕೆಲವು ಬಿಎಂಟಿಸಿ ಬಸ್‍ಗಳು ಹೊರಟಿದ್ದು, ಪರಿಸ್ಥಿತಿ ನೋಡಿಕೊಂಡು ಎಂದಿನಂತೆ ಬಸ್ ಸಂಚಾರ ಆರಂಭಿಸಲು ಬಿಎಂಟಿಸಿ ನಿರ್ಧಾರ ಮಾಡಿದೆ.ಬಸ್‍ಗಳನ್ನು ಡಿಪೋನಿಂದ ಹೊರಬಿಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಬಿಎಂಟಿಸಿ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ 44 ಡಿಪೋ ಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಯಶವಂತಪುರ ಬಿಎಂಟಿಸಿ ನಿಲ್ದಾಣದಿಂದ ಬಸ್ ಸಂಚಾರ ಆರಂಭವಾಗಿ ನೆಲಮಂಗಲ ಕಡೆ ಮೊದಲ ಬಸ್ ಹೊರಟಿತು.ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಕೂಡ ಸಹಜ ಸ್ಥಿತಿಗೆ ಬಂದಿದೆ. 852 ಬಸ್ ಗಳ ಸಂಚಾರ ಆರಂಭವಾಗಿದ್ದು, ರಾಜ್ಯದ ವಿವಿಧ ಮೂಲೆ ಮೂಲೆಗಳಿಗೆ ಸರ್ಕಾರಿ ಬಸ್‍ಗಳು ತೆರಳುತ್ತಿವೆ. Sign in to your account
Username or Email Address


Password

 Remember Me


