ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಬಿದ್ದ ಕುರಿಯನ್ನ ರಕ್ಷಣೆ ಮಾಡಿದ ಕುರಿಯ ಮಾಲೀಕರೊಬ್ಬರು ಮೇಲೆ ಬರಲಾಗದೆ ಕೃಷಿ ಹೊಂಡದಲ್ಲೇ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಮೇಲೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಿಳ್ಳವೆಂಕಟರೋಣಪ್ಪ ಮೃತ ವ್ಯಕ್ತಿ. ಕುರಿಗಳನ್ನ ಮೇಯಿಸುತ್ತಿದ್ದ ವೇಳೆ ಪಾಪಣ್ಣ ಎಂಬವರ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಕುರಿಯೊಂದು ಬಿದ್ದಿದೆ. ಈ ವೇಳೆ ಕೃಷಿ ಹೊಂಡಕ್ಕೆ ಜಿಗಿದು ಕುರಿಯನ್ನ ಮೇಲೆ ಎತ್ತಿ ಹಾಕಿದ ಮಾಲೀಕ ವೆಂಕಟರೋಣಪ್ಪ, ಕೃಷಿ ಹೊಂಡದಿಂದ ಕೊನೆಗೆ ತಾನು ಮೇಲೆ ಬರಲಾಗದೆ ಕೃಷಿ ಹೊಂಡದಲ್ಲೇ ಜೀವ ಬಿಟ್ಟಿದ್ದಾರೆ.ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಮೃತದೇಹವನ್ನ ಮೇಲೆತ್ತಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


