ತುಮಕೂರು: ಹೈಟೆಕ್ ರಾಜಕಾರಣಿ ಎಂದೇ ಆರೋಪ ಹೊತ್ತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಇದೀಗ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ.ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿನ ಗ್ರಾಮ ವಾಸ್ತವ್ಯಕ್ಕೆ ಹೈಟೆಕ್ ಮನೆಯೊಂದನ್ನ ಆಯ್ಕೆ ಮಾಡಿ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ. ಮಂಗಳವಾರ ರಾತ್ರಿ ಪರಮೇಶ್ವರ್ ಅವರು ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿ ಎರಡನೇ ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ.ಕೊರಟಗೆರೆ ತಾಲೂಕಿನ ದೊಗ್ಗನಹಳ್ಳಿಯ ನಾಗರಾಜು ಎನ್ನುವ ರೈತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಬಾರಿ ಪರಮೇಶ್ವರ್ ದಲಿತರೊಬ್ಬರ ಚಿಕ್ಕ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಆದರೆ ಈ ಬಾರಿಯ ವಾಸ್ತವ್ಯಕ್ಕೆ ಗ್ರಾಮದ ಹೈಟೆಕ್ ಮನೆಯನ್ನೇ ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.ಮನೆಯಲ್ಲಿ ಗ್ರಾನೈಟ್, ಹೈಟೆಕ್ ಟಿವಿ, ಮಂಚ, ಐಷಾರಾಮಿ ಕೋಣೆಗಳು ಹಾಗೂ ಎಲ್ಲಾ ಸೌಕರ್ಯವೂ ಇದ್ದು, ಪರಮೇಶ್ವರ್ ಗೆ ಸಕಲ ಸೌಕರ್ಯ ಒದಗಿಸಿದ್ದಾರೆ. ಇದರ ಮಧ್ಯೆ ಕೋಣೆಯೊಂದರಲ್ಲಿ ಚಾಪೆ ಮೇಲೆಯೇ ಮಲಗಿದ ಪರಮೇಶ್ವರ್ ಹೈಟೆಕ್ ನಡುವೆಯೇ ಸರಳತೆ ಪ್ರದರ್ಶಿಸಿದ್ದಾರೆ.Sign in to your account
Username or Email Address


Password

 Remember Me


