ಬೆಂಗಳೂರು: ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ.ಹುಳಿಮಾವಿನ ನಿವಾಸಿ ಪ್ರಶಾಂತ್ ನೇಣಿಗೆ ಶರಣಾದ ಯುವಕ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಶಾಂತ್ ಸ್ವಂತ ದುಡ್ಡು ಖರ್ಚು ಮಾಡಿ ವಿಜಯ್ ಕುಮಾರ್ ಅವರ ಹೊಟೇಲ್ ನಡೆಸುತ್ತಿದ್ದನು.ಹೊಟೇಲ್‍ಗಾಗಿ ಖರ್ಚು ಮಾಡಿದ್ದ ಹಣವನ್ನು ಪ್ರಶಾಂತ್, ವಿಜಯ್ ಕುಮಾರ್‍ನನ್ನು ಕೇಳಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಹಣವನ್ನು ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಮನನೊಂದು ಪ್ರಶಾಂತ್ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


