ಬೆಂಗಳೂರು: ಅಕ್ಕ ತಿರಸ್ಕರಿಸಿದ್ದಕ್ಕೆ ಆಕೆಯ ತಂಗಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಈಗ ಆಕೆಗೆ ದಿನನಿತ್ಯ ಕಿರುಕುಳ ನೀಡುತ್ತಿರುವ ಘಟನೆ ನಗರದ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಚಂದ್ರಶೇಖರ್ ಎಂಬಾತನೇ ಪತ್ನಿಗೆ ಕಿರುಕುಳ ನೀಡುತ್ತಿರುವ ಪತಿ. ಚಂದ್ರಶೇಖರ್ ನಾಲ್ಕು ವರ್ಷಗಳ ಹಿಂದೆ ರೂಪಾ ಅವರನ್ನು ನೋಡಲು ಹೋಗಿದ್ದನು. ಆದ್ರೆ ರೂಪಾ ಚಂದ್ರಶೇಖರ್‍ನನ್ನು ರಿಜೆಕ್ಟ್ ಮಾಡಿದ್ದರು. ರೂಪಾ ಮೇಲಿನ ಕೋಪದಿಂದಾಗ ಆಕೆಯ ಸಹೋದರಿ ಬಿಂದುಶ್ರೀಯನ್ನು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದಾನೆ.ಮದುವೆ ಬಳಿಕ ಚಂದ್ರಶೇಖರ್ ರಿಜೆಕ್ಟ್ ಮಾಡಿದ್ದ ರೂಪಾರ ಮೇಲಿನ ಕೋಪವನ್ನು ಪತ್ನಿ ಬಿಂದುಶ್ರೀ ಮೇಲೆ ತೀರಿಸಿಕೊಳ್ಳುತ್ತಿದ್ದಾನೆ. ಚಂದ್ರಶೇಖರ್ ಪತ್ನಿ ಬಿಂದುಶ್ರೀಗೆ ದೈಹಿಕ ಮತ್ತು ಮಾನಸಿಕವಾಗಿಯೂ ಕಿರುಕುಳ ನೀಡುತ್ತಿದ್ದಾನೆ. ಪತಿಯಿಂದ ಹಲ್ಲೆಗೊಳಗಾಗಿರುವ ಬಿಂದುಶ್ರೀಯನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.https://www.youtube.com/watch?v=GAeOD4es5hkSign in to your account
Username or Email Address


Password

 Remember Me


