ಬಳ್ಳಾರಿ: ಇಲ್ಲಿನ ಮೊರಾರ್ಜಿ ಶಾಲೆಯ ಪ್ರಾಂಶುಪಾಲರ ವಿರುದ್ಧ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಬಳಿ ಮುರಾರ್ಜಿ ಶಾಲೆಯ ನೂರಾರು ಮಕ್ಕಳು ಮಂಗಳವಾರ ಪ್ರಾಂಶುಪಾಲ ಶಶಿಧರ್, ಹೆಣ್ಣು ಮಕ್ಕಳಿಗೆ ಅವಾಚ್ಯವಾಗಿ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಭೋದನೆ ಮಾಡುತ್ತಾನೆ ಎಂದು ರೊಚಿಗೆದ್ದು ಪ್ರತಿಭಟನೆ ನಡೆಸಿದರು.ನಮ್ಮ ಮಾಸ್ಟರ್ ನಮ್ಮ ಮೈ-ಕೈ ಮುಟ್ಟಿ ಮಾತನಾಡಿಸ್ತಾನೆ. ಕೆಟ್ಟ ದೃಷ್ಠಿಯಿಂದ ನೋಡುತ್ತಾ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಾ? ಎಂದು ಕೇಳುತ್ತಾನೆ ಅಂತ ಮಕ್ಕಳು ಪ್ರಾಂಶುಪಾಲರ ವಿರುದ್ಧ ಧ್ವನಿಯೆತ್ತಿದ್ದಾರೆ. ಜೊತೆಗೆ ಕೂಡಲೇ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿ ಎಂದು ಮಕ್ಕಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.ಮುಂಜಾನೆ 11 ಗಂಟೆಯಿಂದ ಶಾಲೆಯ ಮುಂದೆಯೇ ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ತಮಗಾಗುತ್ತಿರುವ ಕಿರುಕುಳದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.ಈ ಶಾಲೆಯ ಪ್ರಾಂಶುಪಾಲ ಶಶಿಧರ್ ಈ ಹಿಂದೆ ಹಡಗಲಿಯ ಶಾಲೆಯಲ್ಲೂ ಇದೇ ರೀತಿಯಾಗಿ ವರ್ತನೆ ಮಾಡಿದ ಪರಿಣಾಮ ಇವರನ್ನು ಹಗರಿಬೊಮ್ಮನಹಳ್ಳಿಯ ಅಂಬಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದಾಗಿ ತಿಳಿದುಬಂದಿದೆ.Sign in to your account
Username or Email Address


Password

 Remember Me


