ಚಿಕ್ಕಮಗಳೂರು: ಆಸ್ತಿಗಾಗಿ ಆಹಾರದಲ್ಲಿ ಇಲಿ ಪಾಷಾಣ ಬೆರೆಸಿ ಸ್ವಂತ ಅಣ್ಣ ಅತ್ತಿಗೆಯನ್ನು ತಮ್ಮನೇ ಕೊಲೆ ಮಾಡಿರೋ ಘಟನೆ ಮೂಡಿಗೆರೆ ತಾಲೂಕಿನ ಕಣಚೂರು ಗ್ರಾಮದಲ್ಲಿ ನಡೆದಿದೆ.ಅಣ್ಣ ವೆಂಕಟೇಶ್ ಮತ್ತು ಅತ್ತಿಗೆ ರುಕ್ಮಿಣಿ ಸಾವನ್ನಪ್ಪಿದ ದುರ್ದೈವಿಗಳು. ಆಸ್ತಿಗಾಗಿ ಕಿತ್ತಾಟ ನಡೆದ ಹಿನ್ನೆಲೆಯಲ್ಲಿ ಸ್ವಂತ ಅಣ್ಣ ಅತ್ತಿಗೆಗೆ ರಾಗಿ ಅಂಬಲಿಯಲ್ಲಿ ತಮ್ಮ ದಿನೇಶ್ 11 ದಿನಗಳ ಹಿಂದೆ ಇಲಿ ಪಾಷಾಣ ಹಾಕಿದ್ದ.ವಿಷ ಸೇವಿಸಿದ್ದ ವೆಂಕಟೇಶ್ ಹಾಗೂ ರುಕ್ಮಿಣಿಯನ್ನ ಪಕ್ಕದ ಮನೆಯವರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ ಭಾನುವಾರ ಸಾವನ್ನಪ್ಪಿದರೆ, ರುಕ್ಮಿಣಿ ಇಂದು ಸಾವನ್ನಪ್ಪಿದ್ದಾರೆ.ಈ ಸಂಬಂಧ ಗೋಣಿಬೀಡು ಪೊಲೀಸರು ಆರೋಪಿ ದಿನೇಶ್ ವಶಕ್ಕೆ ಪಡೆದು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ವೆಂಕಟೇಶ್ ಮತ್ತು ರುಕ್ಮಿಣಿ 14 ವರ್ಷದ ಮಗ ನಿತಿನ್ ಹಾಗೂ 12 ವರ್ಷದ ಪೂಜಾ ಎಂಬ ಇಬ್ಬರು ಮಕ್ಕಳಿದ್ದಾರೆ.Sign in to your account
Username or Email Address


Password

 Remember Me


