ಮಂಡ್ಯ: ಬೈಕಿನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.ಸಂತೋಷ್ ಎಂಬುವವರ ಟೀ ಶಾಪ್ ಮುಂಭಾಗ ಕೋದಂಡರಾಮು ಎಂಬುವವರು ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು. ಟೀ ಕುಡಿದು ವಾಪಸ್ ಹೋಗುವಾಗ ಬೈಕ್‍ನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಇರುವುದು ಕಂಡಿದೆ.ಇದರಿಂದ ಬೈಕ್ ಓಡಿಸಲು ಹೆದರಿದ ಕೋದಂಡರಾಮು, ಗೆಳೆಯರ ಸಹಾಯದಿಂದ ಹಾವನ್ನು ಬೈಕ್ ನಿಂದ ಹೊರ ತೆಗೆದಿದ್ದಾರೆ. ಬೈಕ್‍ನಿಂದ ಹೊರ ಬಂದ ಹಾವು ಯಾವ ಕಡೆ ಹೋಗಬೇಕೆಂದು ತಿಳಿಯದೇ ಮನಸ್ಸೋ ಇಚ್ಚೆ ಓಡಾಡಿದೆ.ಈ ವೇಳೆ ಮಾನವೀಯತೆ ಮೆರೆದ ಸಾರ್ವಜನಿಕರು ಅದನ್ನು ಕೊಲ್ಲದೇ ತನ್ನ ಪಾಡಿಗೆ ತಾನು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.Sign in to your account
Username or Email Address


Password

 Remember Me


