ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಮರುಪ್ರವೇಶಕ್ಕೆ ಹಿನ್ನಡೆಯಾಗಿದೆ. ಬಳ್ಳಾರಿಯಿಂದ ಮತ್ತೆ ರಾಜಕೀಯ ಜೀವದಾನ ಪಡೆಯುವ ಗಣಿಧಣಿಯ ಕನಸಿಗೆ ಕಲ್ಲು ಬಿದ್ದಂತಾಗಿದೆ.ರೆಡ್ಡಿ ಜಾಮೀನು ಮಾರ್ಪಾಡಿಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಹಿಂದಿನ ಷರತ್ತು ಬದಲಾವಣೆಗೆ ಒಪ್ಪದ ಸುಪ್ರೀಂ ಕೋರ್ಟ್, ಬಳ್ಳಾರಿಗೆ ಹೋಗದಂತೆ ವಿಧಿಸಿದ್ದ ಷರತ್ತಿನಲ್ಲಿ ಸಡಿಲಿಕೆ ಇಲ್ಲ ಎಂದು ಹೇಳಿದೆ. ಷರತ್ತಿನ ಪ್ರಕಾರ ಆಂಧ್ರದ ಕರ್ನೂಲು, ಅನಂತಪುರಂಗೂ ರೆಡ್ಡಿ ಭೇಟಿ ನೀಡುವಂತಿಲ್ಲ.ಈ ಹಿಂದೆ ವಿಧಿಸಿದ್ದ ಷರತ್ತುಗಳ ಮಾರ್ಪಾಡಿಗೆ ಸುಪ್ರೀಂ ನಕಾರ ವ್ಯಕ್ತಪಡಿಸಿದ್ದು, ಮೊದಲು ಚಾರ್ಜ್‍ಶೀಟ್ ಸಲ್ಲಿಕೆಯಾಗಲಿ. ಬಳಿಕವಷ್ಟೆ ಜಾಮೀನು ಮಾರ್ಪಾಡು ಬಗ್ಗೆ ತೀರ್ಮಾನ ಎಂದು ಹೇಳಿದೆ.ಅಸೆಂಬ್ಲಿ ಎಲೆಕ್ಷನ್ ಗೆ 3 ತಿಂಗಳಷ್ಟೇ ಉಳಿದಿರುವ ಹಿನ್ನೆಲೆಯಲ್ಲಿ ಷರತ್ತು ಸಡಿಲಿಕೆ ಕೋರಿ ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮಗಳ ಮದುವೆಗಾಗಿ ಜರ್ನಾದನ ರೆಡ್ಡಿ ಬಳ್ಳಾರಿಗೆ ಹೋಗಲು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು.Sign in to your account
Username or Email Address


Password

 Remember Me


