ಹುಬ್ಬಳ್ಳಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೆಲವೇ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ್ರೆ ನಾವು ಬಂದ್ ಗೆ ಕರೆಕೊಡುತ್ತೇವೆ ಎಂದು ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 25 ರ ಬಂದ್ ಹಿಂದಿರುವ ಮಾಸ್ಟರ್ ಮೈಡ್ ಮುಖ್ಯಮಂತ್ರಿ ಸಿದ್ದರಾಮಯ್ಯ. ನಮಗೂ ರಾಜಕೀಯ ಗೊತ್ತು, ನಿಮ್ಮ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ನಾವ್ ಕೂಡ ಬಂದ್ ಗೆ ಕರೆ ಕೊಡ್ತೀವಿ ಅಂತ ಸಿಎಂ ವಿರುದ್ಧ ಕಿಡಕಾರಿದ್ದಾರೆ.ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನೀಡಿರೋ ಬಂದ್ ಕರೆ, ಸರ್ಕಾರದ ಪ್ರಾಯೋಜಿತ ಬಂದ್ ಎಂದು ಗಂಭೀರ ಆರೋಪ ಮಾಡಿದ ಅವರು, ಸಿಎಂ ಸಿದ್ದರಾಮಯ್ಯ ಕುತಂತ್ರದಿಂದ ಬಂದ್ ಗೆ ಕರೆ ನೀಡಲಾಗಿದೆ ಅಂದ್ರು.ಜನವರಿ 25 ರಂದು ಕರ್ನಾಟಕ ಮತ್ತು ಫೆಬ್ರವರಿ 4 ರಂದು ಬೆಂಗಳೂರು ಬಂದ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಈ ಬಂದ್ ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಈ ಎಲ್ಲ ಬಂದ್ ಗಳು ಸರ್ಕಾರ ಪ್ರಾಯೋಜಿತ ಬಂದ್ ಗಳಾಗಿದ್ದು, ಸಿಎಂ ಸಿದ್ದರಾಮಯ್ಯ ಕುತಂತ್ರದಿಂದ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಹಿಂದಿರುವ ಮಾಸ್ಟರ್ ಮೈಂಡ್ ಸಿಎಂ ಸಿದ್ದರಾಮಯ್ಯ. ಈ ವರೆಗೂ ರಾಹುಲ್ ಗಾಂಧಿ ಯಾಕೆ ಮೌನವಾಗಿದ್ದಾರೆ? ರಾಹುಲ್ ಗಾಂಧಿ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಲಿ. ಅಲ್ಲದೇ ನಾವು ಗೋವಾ ಸಿಎಂ ಅವರನ್ನು ಒಪ್ಪಿಸಿದ್ದೇವೆ. ಹಾಗಾದ್ರೆ ಗೋವಾ ಕಾಂಗ್ರೆಸ್ಸಿಗರನ್ನು ಸಿಎಂ ಮೊದಲು ಒಪ್ಪಿಸಲಿ ಎಂದು ಸವಾಲು ಹಾಕಿದರು.Sign in to your account
Username or Email Address


Password

 Remember Me


