ಬೆಂಗಳೂರು: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ನರ್ಸ್ ಆಸ್ಪತ್ರೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ನಗರದ ನಾಗರಭಾವಿಯಲ್ಲಿರುವ ಶ್ರೀದೇವಿ ಆಸ್ಪತ್ರೆಯಲ್ಲಿ ನಡೆದಿದೆ.ನಿಷ್ಕಲಾ(25) ಆತ್ಮಹತ್ಯೆ ಮಾಡಿಕೊಂಡ ನರ್ಸ್. ಶ್ರೀದೇವಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಕಾರ್ಯನಿರ್ವಹಿಸುತ್ತಿದ್ದ ನಿಷ್ಕಲಾ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ವಾರದ ಹಿಂದೆ ನಿಷ್ಕಲಾಳ ಪ್ರೀತಿ ತಿರಸ್ಕರಿಸಿ ಗಂಗಾಧರ್ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಹೋಗಿದ್ದ.ಇಬ್ಬರು ಪ್ರೀತಿಸುತ್ತಿರುವ ಮನೆ ವಿಚಾರ ನಿಷ್ಕಲಾ ಪೋಷಕರಿಗೂ ತಿಳಿದಿತ್ತು. ಆದರೆ ಕೆಲ ದಿನಗಳಿಂದ ಗಂಗಾಧರ್ ಜಾತಿಯ ನೆಪವೊಡ್ಡಿ ಮದುವೆಗೆ ನಿರಾಕರಿಸಿದ್ದ. ಈ ಕುರಿತು ನಿಷ್ಕಲಾ ಸಹೋದರನಿಗೂ ಗಂಗಾಧರ್ ನಡುವೆ ಜಗಳ ಸಂಭವಿಸಿತ್ತು. ಈ ಘಟನೆಯ ನಂತರ ತೀವ್ರವಾಗಿ ಮನನೊಂದಿದ್ದ ನಿಷ್ಕಲಾ ಇಂದು ಕೆಲಸಕ್ಕೆ ತೆರಳಿ ಆಸ್ಪತ್ರೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಿಷ್ಕಲಾ ಪೋಷಕರು ಗಂಗಾಧರ್ ತಮ್ಮ ಮಗಳಿಗೆ ಪ್ರೀತಿಯ ಹೆಸರು ಹೇಳಿ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಘಟನೆಯ ಕುರಿತು ನಿಷ್ಕಲಾ ಸಹೋದರ ಚಂದ್ರಾಲೇಔಟ್ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


