ವಿಜಯಪುರ: ವೈದ್ಯರು, ಸಿಬ್ಬಂದಿ ಕೆಲಸ ಬಿಟ್ಟು ದುಡ್ಡಿಗಾಗಿ ಯಕ್ಕಾ ರಾಜಾ ರಾಣಿ ಆಟ ಆಡುತ್ತಿರೋ ಘಟನೆ ವಿಜಯಪುರದಲ್ಲಿ ನಡೆದಿದೆ.ಆಸ್ಪತ್ರೆಯ ಕಂಪೌಂಡರ್ ರಾಜೀವ್ ಬಳ್ಳಾರಿ ಹಾಗೂ ಅಂಬುಲೆನ್ಸ್ ಡ್ರೈವರ್ ಪಾಂಡು ನೇತೃತ್ವದಲ್ಲಿ ಪ್ರತಿನಿತ್ಯ ಕೆಲಸ ಮಾಡದೆ ಇಸ್ಪೀಟು ಆಟದಲ್ಲಿ ಮಗ್ನನಾಗಿರುತ್ತಾರೆ. ರಾಜೀವ್ ಬಳ್ಳಾರಿ ಜೊತೆಗೆ ಅಂಬುಲೆನ್ಸ್ ಡ್ರೈವರ್ ಪಾಂಡು ಸೇರಿದಂತೆ ನಿವೃತ್ತರಾದ ಡಾಕ್ಟರ್‍ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.ಪ್ರತಿನಿತ್ಯ ಏನಿಲ್ಲ ಎಂದರೂ ಸಾವಿರಾರು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ವಿಜಯಪುರ ಸೇರಿದಂತೆ ಸೊಲ್ಲಾಪುರ ಹಾಗೂ ಮಹಾರಾಷ್ಟ್ರದಿಂದ ಕೂಡ ರೋಗಿಗಳು ವಿಜಯಪುರ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಇಷ್ಟೆಲ್ಲಾ ರೋಗಿಗಳ ಪಾಲಿಗೆ ದೇವರು ಆಗೋ ಬದಲು ಕ್ಷಣಿಕ ವೇಳೆಯಲ್ಲಿ ಹಣಗಳಿಸುವ ಸಲುವಾಗಿ ಸರ್ಕಾರಿ ಆಸ್ಪತ್ರೆಯನ್ನೇ ಇಸ್ಪೀಟು ಆಡ್ಡಾವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ರೋಗಿಗಳ ಪ್ರಾಣದ ಜೊತಗೆ ಚೆಲ್ಲಾಟವಾಡುತ್ತಿರೋದು ಮಾತ್ರ ಸುಳ್ಳಲ್ಲ.Sign in to your account
Username or Email Address


Password

 Remember Me


