ಬೆಂಗಳೂರು: ಸ್ನೇಹಿತರ ಜೊತೆ ಪಾರ್ಟಿ ಮಾಡಿದ ಯುವಕ ಮದ್ಯದ ಅಮಲಿನಲ್ಲಿ ನಾಲ್ಕನೇ ಮಹಡಿ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾದರಮಂಗಲ ಸ್ಲಂಬೋರ್ಡ್ ನಲ್ಲಿ ನಡೆದಿದೆ.ರಾಜಶೇಖರ್ (22) ಮೃತ ದುರ್ದೈವಿ. ಮೃತ ರಾಜಶೇಖರ್ ಬೆಂಗಳೂರಿನ ಬಯ್ಯಪ್ಪನಹಳ್ಳಿ ನಿವಾಸಿಯಾಗಿದ್ದು, ಪೇಂಟರ್ ಕೆಲಸ ಮಾಡಿಕೊಂಡು ಸ್ಲಂ ಬೋರ್ಡ್ ನಲ್ಲಿ ನೆಲೆಸಿದ್ದ ಎನ್ನಲಾಗಿದೆ.ಇಂದು ಬೆಳಗ್ಗೆ ಕೆಲಸದ ನಿಮಿತ್ತ ಚೆನ್ನೈಗೆ ತೆರಳಬೇಕಿದ್ದ ರಾಜಶೇಖರ್ ಭಾನುವಾರ ರಾತ್ರಿ ಸ್ನೇಹಿತರ ಜೊತೆ ಗುಂಡು ಪಾರ್ಟಿ ಮಾಡಿದ್ದು, ಸ್ನೇಹಿತರು ವಾಪಸ್ ತೆರಳಿದ ಮೇಲೆ ಕಾಡುಗುಡಿ ಠಾಣಾ ವ್ಯಾಪ್ತಿಯ ಸಾದರಮಂಗಲ ಸ್ಲಂ ಬೋರ್ಡನ ಕಟ್ಟಡದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾಡುಗುಡಿ ಪೊಲೀಸರು ಪರಿಶೀಲನೆ ನಡೆಸಿದಾಗ ಕಟ್ಟಡದ ಮೇಲಿನ ಭಾಗದಲ್ಲಿ ಮೃತನ ಚಪ್ಪಲಿ ಹಾಗೂ ಇತರೆ ವಸ್ತುಗಳು ದೊರೆತಿದ್ದು, ಪ್ರಕರಣ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ರಾಜಶೇಖರ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


