ಮಂಗಳೂರು: ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಮಂಗಳೂರಿನ ತಣ್ಣೀರುಬಾವಿಯಲ್ಲಿ ನಡೆದಿದೆ.39 ವರ್ಷದ ಶಿವರಾಜ್ ಕೊಲೆಯಾದ ವ್ಯಕ್ತಿ. ಶಿವರಾಜ್ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ನ ಭರತೇಶ್ ಎಂಬವನ ಅಣ್ಣ. ಶಿವರಾಜ್ ಮನೆಯ ಟೆರೇಸ್ ಮೇಲೆ ಮಲಗ್ಗಿದ್ದ ವೇಳೆ ಇಂದು ಬೆಳಗಿನ ಜಾವ 5 ಗಂಟೆಗೆ ಕೊಲೆ ನಡೆದಿದೆ. ಬೆಳಗಿನ ಜಾವ ಮನೆಗೆ ಮೂವರು ದುಷ್ಕರ್ಮಿಗಳು ನುಗ್ಗಿ ಕೊಲೆ ಮಾಡಿದ್ದಾರೆ.ಕೊಲೆಯಾಗಿರುವ ಶಿವರಾಜ್ ಮೇಲೆ ಯಾವುದೇ ಪ್ರಕರಣಗಳಿಲ್ಲ. ಆದ್ರೆ ಶಿವರಾಜ್ ತಮ್ಮ ರೌಡಿಶೀಟರ್ ಭರತೇಶ್ ಮೇಲೆ ಕೊಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಭರತೇಶ್ ಗೂಂಡಾ ಕಾಯ್ದೆಯಡಿ ಗಡಿ ಪಾರಾಗಿದ್ದಾನೆ. ತಮ್ಮನ ಮೇಲಿನ ದ್ವೇಷಕ್ಕೆ ವಿರೋಧಿ ತಂಡದವರು ಅಣ್ಣ ಶಿವರಾಜ್ ರನ್ನು ಕೊಲೆ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಸ್ಥಳಕ್ಕೆ ಪಣಂಬೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


