ರಾಮನಗರ: ಹುಟ್ಟಿನಿಂದ ಅಂಧತ್ವದಲ್ಲೇ ಬದುಕುತ್ತಿದ್ದ ಅಂಧರಿಬ್ಬರು ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ತಾಲೂಕಿನ ರಂಗನಾಥಸ್ವಾಮಿ ದೇವಾಲಯದಲ್ಲಿ ನಾಗರತ್ನ ಹಾಗೂ ಭೀಮಣ್ಣ ಎಂಬ ಅಂಧರಿಬ್ಬರು ಮದುವೆಯಾಗಿದ್ದಾರೆ. ದ್ವಿತೀಯ ಪಿಯುಸಿವರೆಗೆ ವ್ಯಾಸಾಂಗ ಮಾಡಿರುವ ಇಬ್ಬರೂ ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದಾರೆ.ಮುನ್ನೇನಹಳ್ಳಿ ಗ್ರಾಮದ ಗೋವಿಂದಾಚಾರ್ ರವರ ಪುತ್ರಿ ನಾಗರತ್ನ ಹಾಗೂ ಮೈಸೂರಿನ ಬಿ.ಜಿ ಪುರದ ನಿವಾಸಿ ಭೀರೇಗೌಡರ ಪುತ್ರ ಭೀಮಣ್ಣನಿಗೂ ಇಂದು ವಿವಾಹ ನೆರವೇರಿದೆ. ಎರಡೂ ಕುಟುಂಬದ ಹಿರಿಯರೂ ಹಾಗೂ ಸ್ನೇಹಿತರು ವಿವಾಹ ಕಾರ್ಯಕ್ರಮದಲ್ಲಿ ಹಾಜರಿದ್ದರು.ಅಂಧತ್ವವಿದ್ದರೂ ತಾವು ಮಾದರಿಯಾಗಿ ಬದುಕುವ ವಿಶ್ವಾಸವಿದೆ ಎಂದು ನವ ವಧು-ವರ ಹೇಳಿದ್ರು.







 Advertisement 











 Advertisement 




Sign in to your account
Username or Email Address


Password

 Remember Me


