ಮೈಸೂರು: ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪಾದಚಾರಿ ಮಾರ್ಗದಲ್ಲಿ ಕುಳಿತು ತಿಂಡಿ ತಿಂದಿದ್ದಾರೆ.ಮೈಸೂರಿನಲ್ಲಿ ದೋಸೆಗೆ ಹೋಟೆಲ್ ಮೈಲಾರಿ ತುಂಬಾ ಫೇಮಸ್. ಹೇಳಿ ಕೇಳಿ ಈ ಹೋಟೆಲ್ ತುಂಬಾ ಚಿಕ್ಕದ್ದು. 10 ಜನ ತಿಂಡಿ ತಿನ್ನುತ್ತಾ ಕೂತುಬಿಟ್ಟರೆ ಹೋಟೆಲ್ ಹೌಸ್ ಫುಲ್ ಆಗುತ್ತೆ.ಸಚಿವ ಸಂತೋಷ್ ಲಾಡ್ ಮೈಸೂರಿನ ಕೆಲ ಸ್ಥಳೀಯ ಮುಖಂಡರ ಜೊತೆ ತಿಂಡಿ ತಿನ್ನಲು ಮೈಲಾರಿ ಹೋಟೆಲ್‍ಗೆ ಹೋಗಿದ್ದರು. ಆದರೆ, ಒಳಗೆ ಕುಳಿತುಕೊಳ್ಳಲು ಜಾಗ ಇರಲಿಲ್ಲ. ಹೀಗಾಗಿ ದೋಸೆಯನ್ನು ಹೋಟೆಲ್ ಹೊರಗೆ ತರಸಿಕೊಂಡು ಪಾದಾಚಾರಿ ಮಾರ್ಗದಲ್ಲೆ ಕುಳಿತು ತಿಂಡಿ ತಿಂದಿದ್ದಾರೆ.Sign in to your account
Username or Email Address


Password

 Remember Me


