ಚಿಕ್ಕಬಳ್ಳಾಪುರ: ಸರ್ಕಾರದ ಸಾಧನಾ ಸಮಾವೇಶವನ್ನ ಸರ್ಕಾರದ ಹಣದಿಂದಲೇ ಮಾಡೋದು. ಅದು ಬಿಟ್ಟು ನನ್ನ ಹಣದಿಂದ ಮಾಡ್ಲಾ? ಅಂತ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಮಾತನಾಡಿದ ಅವರು, ವಿಪಕ್ಷದವರು ತಮ್ಮ ಹಣದಿಂದ ಮಾಡಿದ್ರಾ? ಪ್ರಧಾನಿ ಮೋದಿ ಫಾರಿನ್‍ಗೆ ತಮ್ಮ ಹಣದಿಂದ ಹೋಗಿ ಬರ್ತಾರಾ ಅಂತ ಪ್ರಶ್ನೆ ಮಾಡಿದ್ರು.ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್‍ಗೆ ಕೆಲ ಸಚಿವರು ಕಪ್ಪ ಕಾಣಿಕೆ ಕೊಡ್ತಾರೆ ಅನ್ನೋ ಕುಮಾರಸ್ವಾಮಿ ಯವರ ಆರೋಪಕ್ಕೆ ತಿರುಗೇಟು ನೀಡಿದ್ರು. ಕುಮಾರಸ್ವಾಮಿಯವರ ಬಳಿ ಈ ಬಗ್ಗೆ ದಾಖಲೆಯಿದ್ದರೆ ಬಿಡುಗಡೆ ಮಾಡಲಿ. ಇದು ಕುಮಾರಸ್ವಾಮಿಯವರ ಅತ್ಯಂತ ಬೇಜಾವಾಬ್ದಾರಿ ಹೇಳಿಕೆ ಎಂದರು.ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಸಿಎಂ ಸ್ಪಷ್ಟಪಡಿಸಿದರು.Sign in to your account
Username or Email Address


Password

 Remember Me


