ಮೈಸೂರು: ಮುಸ್ಲಿಂ ಯುವಕನೊಂದಿಗೆ ಜೈನ ಧರ್ಮದ ಯುವತಿ ಓಡಿ ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ಆದರೆ ಯುವತಿಯ ಪೋಷಕರು ಇದೊಂದು ಲವ್ ಜಿಹಾದ್ ಎಂದು ಆರೋಪಿಸುತ್ತಿದ್ದಾರೆ.ಮೈಸೂರಿನ ದಿವಾನ್ಸ್ ರಸ್ತೆಯ ಜಯಂತಿ ಲಾಲ್ ಎಂಬವರ ಪುತ್ರಿ ಪೂಜಾಕುಮಾರಿ (21), ಮಂಡಿಮೋಹಲ್ಲಾದ ಅಬ್ದುಲ್ ನಾಸೀರ್(28) ಎಂಬ ಯುವಕನೊಂದಿಗೆ ಓಡಿ ಹೋಗಿದ್ದರು. ಮೂರು ದಿನಗಳ ಹಿಂದೆ ನಗರದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪೂಜಾಕುಮಾರಿ ತಾನು ಇಚ್ಚೆಯಿಂದ ಅಬ್ದುಲ್ ಜೊತೆ ಹೋಗಿರುವುದಾಗಿ ತಿಳಿಸಿದ್ದರು. ನನ್ನ ಮಗಳ ಮೇಲೆ ಒತ್ತಡ ಹಾಕಿ ಕರೆದುಕೊಂಡು ಹೋಗಲಾಗಿದೆ. ಈ ಬಗ್ಗೆ ದೂರು ನೀಡಲು ಹೋದರೆ ಪೊಲೀಸರು ನಿಮ್ಮ ಮಗಳೆ ಅವನೊಂದಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ ಅಂತಾ ಪುಜಾಕುಮಾರಿ ತಂದೆ ಜಯಂತಿ ಲಾಲ್ ಹೇಳುತ್ತಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಧೀಶರ ಮುಂದೆ ಇತ್ಯರ್ಥ ಮಾಡೋದು ಬಿಟ್ಟು, ಯಾಕೇ ನಿರ್ಧಾರ ಕೈಗೊಂಡು ನಮ್ಮ ಮಗಳನ್ನು ಅವನೊಂದಿಗೆ ಕಳುಹಿಸಬೇಕು. ನನ್ನ ಮಗಳನ್ನ ಡ್ರಗ್ಸ್ ಹಾಗೂ ನೀಲಿ ಚಿತ್ರ ತೋರಿಸಿ ಬೆದರಿಕೆ ಹಾಕಿದ್ದು, ಒತ್ತಡದಿಂದಾಗಿ ಮಗಳು ಆತನೊಂದಿಗೆ ಹೋಗಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಿ ಅಂತಾ ಜಯಂತಿ ಲಾಲ್ ಪೊಲೀಸರ ಬಗ್ಗೆ ಅಸಮಧಾನವನ್ನು ಹೊರ ಹಾಕಿದರು.ಪೊಲೀಸರು ನಮ್ಮ ದೂರನ್ನು ದಾಖಲಿಸಿಕೊಳ್ಳುವಂತೆ ಲಕ್ಷೀಪುರಂ ಪೊಲೀಸ್ ಠಾಣೆಯ ಮುಂದೆಯೇ ನಿಂತು ಕೊಂಡಿದ್ದಾರೆ.Sign in to your account
Username or Email Address


Password

 Remember Me


