ಬೆಂಗಳೂರು: ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಡ್ರೆಸ್ ಕೋಡ್ ಪಾಲನೆ ಮಾಡಬೇಕೆಂದು ಮುಜರಾಯಿ ಇಲಾಖೆ ದೇಗುಲಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.ಮಹಿಳಾ ಸಿಬ್ಬಂದಿಗೆ ಸಲ್ವಾರ್ ಕಮೀಜ್, ಕುರ್ತಾಗಳನ್ನು ನಿಷೇಧಿಸಲಾಗಿದೆ. ಪುರಷರಿಗೆ ಜೀನ್ಸ್ ಪ್ಯಾಂಟ್‍ಗಳನ್ನು ಧರಿಸದಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಹಿಳಾ ಸಿಬ್ಬಂದಿ ನೀಲಿ ಸೀರೆ , ಬಿಳಿ ಬ್ಲೌಸ್ ಮತ್ತು ಪುರುಷ ಸಿಬ್ಬಂದಿಗೆ ನೀಲಿ ಶರ್ಟ್, ಸೆಕ್ಯೂರಿಟಿ ಗಳಿಗೆ ಖಾಕಿ ಪ್ಯಾಂಟ್ ಖಾಕಿ ಶರ್ಟ್ ಧರಿಸಲು ಆದೇಶಿಸಲಾಗಿದೆ. ಈ ಡ್ರೆಸ್ ಕೋಡ್ ಕಡ್ಡಾಯವಿದ್ದರೂ ಇದೂವರೆಗೂ ಪಾಲನೆ ಆಗುತ್ತಿರಲಿಲ್ಲ. ಹಾಗಾಗಿ ಮುಜರಾಯಿ ಇಲಾಖೆ ಮರು ಸುತ್ತೋಲೆಯನ್ನು ಹೊರಡಿಸಿದೆ.ಮುಜರಾಯಿ ಇಲಾಖೆಯ ಈ ಆದೇಶ ಎ ಮತ್ತು ಬಿ ಗ್ರೇಡ್ ದೇವಾಲಯಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಹಿಂದೆ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಮಾಡಬೇಕೆಂದು ಚಿಂತಿಸಲಾಗಿತ್ತು. ಆರಂಭದಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ವಿಧಿಸುವುದರಿಂದ ಬೇರೆ ರಾಜ್ಯ ಮತ್ತು ವಿದೇಶಗಳಿಂದ ಬರುವ ಭಕ್ತಾದಿಗಳ ಸಂಖ್ಯೆ ಇಳಿಮುಖವಾಗಲಿದೆ ಎಂಬ ಉದ್ದೇಶದಿಂದ ಯೋಚನೆಯನ್ನು ಆರಂಭದಲ್ಲಿಯೇ ಕೈಬಿಡಲಾಯಿತು.Sign in to your account
Username or Email Address


Password

 Remember Me


