ಕೊಪ್ಪಳ: ವೈದ್ಯರ ಎಡವಟ್ಟಿನಿಂದಾಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.ಮೃತ ದುರ್ದೈವಿ ಬಾಲಕಿಯನ್ನು ಗಾಯಿತ್ರಿ(11) ಎಂದು ಗುರುತಿಸಲಾಗಿದೆ. ವೈದ್ಯ ಡಾ. ಸಂತೋಷ್ ಕುಮಾರ್ ಎಂಬವರು ಈ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.ಬಾಲಕಿ ಗಾಯಿತ್ರಿ ಜ್ವರದಿಂದ ಬಳಲುತ್ತಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಡಾ. ಸಂತೋಷ್ ಚುಚ್ಚು ಮದ್ದು ಕೊಟ್ಟಿದ್ದಾರೆ. ಆ ಬಳಿಕ ಬಾಲಕಿಯ ತೊಡೆಯ ಭಾಗದಲ್ಲಿ ಹಸಿರುಬಣ್ಣಕ್ಕೆ ತಿರುಗಿ ಊತವುಂಟಾಗಿದೆ. ಹೀಗಾಗಿ ಮೆಡಿಸಿನ್ ರಿಯಾಕ್ಷನ್ ನಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.ಇದೀಗ ಪೋಷಕರು ವೈದ್ಯನ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟಿದ್ದಾಳೆ ಅಂತ ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕಳೆದುಕೊಂಡ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.ಈ ಘಟನೆ ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Sign in to your account
Username or Email Address


Password

 Remember Me


