ಕಲಬುರಗಿ: ಕೆಇಎ ಪರೀಕ್ಷೆಯ (KEA Exam) ಮೊದಲ ದಿನವೇ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸುತ್ತಿದ್ದ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಯಾದಗಿರಿಯಲ್ಲಿ ಇಬ್ಬರು ಅಭ್ಯರ್ಥಿಗಳು ಸೇರಿ 6 ಮಂದಿ, ಕಲಬುರಗಿಯಲ್ಲಿ (Kalaburgi) ಐವರು ಅಭ್ಯರ್ಥಿಗಳು ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲೂ ಸೊನ್ನಾ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಕಿವಿಯಲ್ಲಿದ್ದ ಸಣ್ಣ ಬ್ಲೂಟೂತ್ ತೆಗೆಸಲು ಪೊಲೀಸರು, ENT ವೈದ್ಯರ ಮೊರೆ ಹೋಗಬೇಕಾಯ್ತು. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀತ್ರಿಮೂರ್ತಿ ಸಹೋದರನಿಗೆ PSI ಹಗರಣದ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಗ್ಯಾಂಗ್ ಕೀ ಆನ್ಸರ್ ಒದಗಿಸಿತ್ತು. ಹೀಗಾಗಿ ಆರ್‌.ಡಿ ಪಾಟೀಲ್ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇನ್ನು, ಬಂಧಿತರಲ್ಲಿ ಬಹುತೇಕರು ಅಫ್ಜಲಪುರದ ಸೊನ್ನ ಗ್ರಾಮದವರಾಗಿದ್ದಾರೆ. ಇದನ್ನೂ ಓದಿ: ವಿಜಯಪುರ‌ದ 40 ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿ – ಡಿಸಿ ಮೆಚ್ಚುಗೆಈ ಸಂಬಂಧ ಕಲಬುರಗಿಯಲ್ಲಿ ನಗರ ಪೋಲಿಸ್ ಆಯುಕ್ತ ಆರ್.ಚೇತನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ (Kalaburgi Examination Center) ಅಕ್ರಮ ನಡೆದಿದ್ದು, ಅಭ್ಯರ್ಥಿ ತ್ರಿಮೂರ್ತಿ ಹಾಗೂ ಅಭ್ಯರ್ಥಿ ಸಹೋದರ ಅಂಬರೀಷ್ ಮತ್ತು ಆರ್.ಡಿ.ಪಾಟೀಲ್ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.ಅಭ್ಯರ್ಥಿ ತ್ರಿಮೂರ್ತಿ ತನ್ನ ಎಡ ಕಿವಿಯಲ್ಲಿ ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾನೆ. ಪರೀಕ್ಷಾ ಕೇಂದ್ರದ ಹೊರಗಡೆ ಕಾರ್‌ನಲ್ಲಿ ಕುಳಿತುಕೊಂಡು ಆತನ ಸಹೋದರ ಅಂಬರೀಷ್, ಕೀ ಉತ್ತರ ಹೇಳುತ್ತಿದ್ದದ್ದು ಕಂಡುಬಂದಿದೆ. ಅಂಬರೀಷ್‌ಗೆ ಆರ್.ಡಿ ಪಾಟೀಲ್ ಹಾಗೂ ಆತನ ಸಂಗಡಿಗರಿಂದ ಕೀ ಉತ್ತರಗಳು ದೊರೆಯುತ್ತಿದ್ದವು ಎಂದು ಮಾಹಿತಿ ಬಂದಿದೆ. ಇದನ್ನೂ ಓದಿ: ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ 2,500 ಶಾಸಕರನ್ನು ಖರೀದಿ ಮಾಡಿದೆ: ಸಂತೋಷ್ ಲಾಡ್ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾದ ಶಿಲ್ಪಾ ಚನ್ನವೀರ ಚಕ್ಕಿ ಅವರು ನೀಡಿ ದೂರಿನ ಅಡಿಯಲ್ಲಿ ಐಪಿಸಿ ಸೆಕ್ಷನ್ 420, 120ಬಿ, 109, 114, 36, 37, 34 ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು, ಸಂಪೂರ್ಣ ತನಿಖೆ ನಂತರವೇ ಸತ್ಯಾಂಶ ತಿಳಿಯಲಿದೆ ಎಂದು ತಿಳಿಸಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


