ಮಂಗಳೂರು: ಅಳಿಯನೊಬ್ಬ ತನ್ನ ಅತ್ತೆ ಮೇಲೆ ಹೀನಾಯವಾಗಿ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.ತಾಲೂಕಿನ ವೇಣೂರು ಬಳಿಯ ಜಂತಿಗೋಳಿ ಎಂಬಲ್ಲಿ ಘಟನೆ ನಡೆದಿದ್ದು, ಥಳಿಸುವ ವಿಡಿಯೋ ವೈರಲ್ ಆಗಿದೆ. ಹೇಮಂತ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ವೃದ್ಧ ಅತ್ತೆ ರೇಖಾ ಮೇಲೆ ಥಳಿಸಿದ್ದಾನೆ. ಈ ಕೃತ್ಯವನ್ನು ನೆರೆಮನೆಯವರು ವಿಡಿಯೋ ಮಾಡಿದ್ದು, ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.ಹೇಮಂತ್ ಮನೆ ಬಳಿಯ ತನ್ನ ಜಾಗದಲ್ಲಿ ಇಟ್ಟಿಗೆ ನಿರ್ಮಿಸುತ್ತಿದ್ದು, ಅದರಿಂದ ಸ್ಥಳೀಯರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಸ್ಥಳೀಯರು ಪಂಚಾಯತಿಗೆ ದೂರು ಕೊಟ್ಟಿದ್ದು ದೂರು ಅರ್ಜಿಗೆ ಅತ್ತೆ ರೇಖಾ ಕೂಡ ಸಹಿ ಮಾಡಿದ್ದರು. ಈ ವಿಚಾರದಲ್ಲಿ ವೈಮನಸ್ಸು ಹೊಂದಿದ್ದ ಅಳಿಯ ಹೇಮಂತ್, ತನ್ನ ಪತ್ನಿಯ ಎದುರಲ್ಲಿಯೇ ಅತ್ತೆ ಮೇಲೆ ಹಲ್ಲೆ ಮಾಡಿದ್ದಾನೆ.ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.https://www.youtube.com/watch?v=b7arENT2E-ASign in to your account
Username or Email Address


Password

 Remember Me


