ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಪಾದಚಾರಿ ಮಹಿಳೆಯ ಕಾಲಿನ ಮೇಲೆ ಹರಿದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ನಡೆದಿದೆ.ಅತೀ ವೇಗವಾಗಿ ಬಂದ ಮಹಾರಾಷ್ಟ್ರ ಮೂಲದ ಲಾರಿ ನೆಲಮಂಗಲ ತಾಲೂಕಿನ ಮಾದೇನಹಳ್ಳಿ ಗ್ರಾಮದ ಸುವರ್ಣಮ್ಮ (44) ಅವರ ಕಾಲಿನ ಮೇಲೆ ಹರಿದಿದೆ. ಇನ್ನೂ ಘಟನೆಯ ವೇಳೆ ಮಹಿಳೆ ಕೆಲಕಾಲ ತೀವ್ರ ರಕ್ತಸ್ತ್ರಾವದಿಂದ ನಡು ರಸ್ತೆಯಲ್ಲಿ ಸಹಾಯಕ್ಕಾಗಿ ಒದಾಡ್ಡಿದ್ದಾರೆ.ಈ ಘಟನೆ ವೇಳೆ ಸುತ್ತ ಮುತ್ತ ಇದ್ದ ಜನರು ಸಹಾಯಕ್ಕೆ ಬಾರದೇ ಮಾನವಿಯತೆ ಮರೆತವರಂತೆ ವರ್ತಿಸುತ್ತಿದ್ದಾರೆ. ತಡವಾಗಿ ಬಂದ 108 ಅಂಬುಲೆನ್ಸ್ ಮೂಲಕ ಸುವರ್ಣಮ್ಮ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಲಾರಿ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುದ್ದಾರೆ.Sign in to your account
Username or Email Address


Password

 Remember Me


