ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ನಟಿ ಅಭಿನಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಭಿನಯ, ನನಗೆ ಅವರು ಗಾರ್ಡ್ ಫಾದರ್ ಆಗಿದ್ದರು. ನನಗೆ ಸಿನಿಮಾದಲ್ಲಿ ನಟಿಸಲು ಬರುತ್ತಿರಲಿಲ್ಲ. ಆಗ ಮಕ್ಕಳ ತರ ನನಗೆ ಹೇಳಿಕೊಡುತ್ತಿದ್ದರು ಅಂದ್ರು. ಈ ವೇಳೆ ನನಗೆ ಮಾತನಾಡೋಕೆ ಆಗುತ್ತಿಲ್ಲ ಎಂದು ಗದ್ಗದಿತರಾದ್ರು,ನನಗೆ ಈಗಲೂ ನಂಬುವುದಕ್ಕೆ ಆಗುತ್ತಿಲ್ಲ. ಈಗಲೂ ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ. ನಾನು ಕೊನೆಯಾದಾಗಿ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಅವರನ್ನ ನೋಡಿದ್ದೆ. ಈಗ ಏನಾಯ್ತು ಗೊತ್ತಿಲ್ಲ. ನಾನು ಶೂಟಿಂಗ್‍ನಲ್ಲಿ ಇದ್ದೆ. ಮೆಸೇಜ್ ಬಂತು, ನಾನು ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಏನೂ ಮಾತನಾಡಲೂ ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.ಕಾಶಿನಾಥ್ ಅಗಲಿಕೆಯ ಬಗ್ಗೆ ಮಾತನಾಡಿದ ನಟಿ ತಾರಾ, ಅವರಿಗೆ ಕ್ಯಾನ್ಸರ್ ಇರುವುದೇ ಗೊತ್ತಿರಲ್ಲಿಲ್ಲ. ತಕ್ಷಣ ಸುದ್ದಿ ಕೇಳಿ ಶಾಕ್ ಆಯಿತು. ನಾನು ಅವರನ್ನು ನೋಡಿ ಬಹಳ ವರ್ಷ ಆಯಿತು. ನಾನು ಬಹಳ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದೇನೆ. ತುಂಬಾ ಬೇಸರವಾಗುತ್ತಿದೆ ಅಂದ್ರು.ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಕಾಶಿನಾಥ್ ಅಗಲಿದ್ದಾರೆ.43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟನೆ ಮಾಡಿದ್ದರು. ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು.11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ.  






 Advertisement 




Sign in to your account
Username or Email Address


Password

 Remember Me


