ರಾಯಚೂರು: ಜೆಡಿಎಸ್ ಶಾಸಕರಾದ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್, ರಾಯಚೂರು ನಗರ ಕ್ಷೇತ್ರದ ಡಾ.ಶಿವರಾಜ್ ಪಾಟೀಲ್ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಇಂದು ಬೆಳಿಗ್ಗೆ 10:30ಕ್ಕೆ ಜೆಡಿಎಸ್ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.ಈಗಾಗಲೇ ಸಭಾಪತಿಯನ್ನ ಭೇಟಿ ಮಾಡಿರುವ ಶಾಸಕರು, ಸಭಾಪತಿಗಳ ಸಲಹೆ ಮೇರೆಗೆ ಇಂದು ವಿಧಾನಸೌಧಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ. 11 ಗಂಟೆಯ ಬಳಿಕ ಬಿಜೆಪಿ ಕಚೇರಿಗೆ ತೆರಳಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಈ ಮೂಲಕ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನೋ ವದಂತಿಗೆ ಇಬ್ಬರು ಶಾಸಕರು ತೆರೆ ಎಳೆಯಲಿದ್ದಾರೆ.ಜೆಡಿಎಸ್ ಪಕ್ಷದ ಮುಖಂಡರು ನಮ್ಮನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಅದರಿಂದ ಬೇಸತ್ತು ಬಿಜೆಪಿ ಸೇರುತ್ತಿರೋದಾಗಿ ಮಾನಪ್ಪ ವಜ್ಜಲ್ ಹಾಗೂ ಶಿವರಾಜ್ ಪಾಟೀಲ್ ಹೇಳಿದ್ದಾರೆ. ಇನ್ನೂ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಕ್ಕಾ ಆಗಿಲ್ಲ. ಆದ್ರೂ ಟಿಕೆಟ್ ಸಿಗುವ ಭರವಸೆಯನ್ನ ಇಬ್ಬರೂ ಶಾಸಕರು ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


