ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ನಟ ಶಿವರಾಜ್‍ಕುಮಾರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.ಇದೇ ವೇಳೆ ಮಾತನಾಡಿದ ಅವರು, ಕಾಶೀನಾಥ್ ನಿಧನ ಸುದ್ದಿಕೇಳಿ ತುಂಬ ನೋವಾಯ್ತು. ಕಾಶಿನಾಥ್ ಒಬ್ಬ ಲೆಜೆಂಡ್. ಕಾಶಿನಾಥ್ ಸಿನಿಮಾಗಳು ಅಂದ್ರೆನೇ ಬ್ರಾಂಡ್. ಪುಟ್ಟಣ್ಣ ಕಣಗಲ್ ಬಿಟ್ರೆ ನನಗೆ ಬಹಳ ಅಚ್ಚುಮೆಚ್ಚಿನ ನಿರ್ದೇಶಕ ಅಂತ ಹೇಳಿದ್ರು.ಅವರ ಧ್ವನಿ ನನಗೆ ಬಹಳ ಇಷ್ಟ. ಬಹಳ ಮುಗ್ಧತೆ ಹಾಗೂ ಮಾನವಿಯತೆ ಇರೋ ನಟ. ಸುದ್ದಿ ಕೇಳಿ ನಂಬಲು ಸಾಧ್ಯವಾಗಲಿಲ್ಲ. ಇನ್ನೂ ಹಲವು ದಿನ ನಮ್ಮೊಂದಿಗೆ ಇರಬೇಕಿತ್ತು. ತುಂಬಾ ಶಾಕಿಂಗ್ ಸುದ್ದಿ. ಶೂಟಿಂಗ್ ಮೊಟಕುಗೊಳಿಸಿ ಇಲ್ಲಿಗೆ ಬಂದ್ವಿ. ಕಾಶಿನಾಥ್ ಸಿನಿಮಾಗಳಿಗೆ ಅವರದ್ದೇ ಬ್ರಾಂಡ್ ಇತ್ತು. ಹಾಗಾಗಿಯೇ ಅವರು ಸಿನಿಮಾರಂಗದ ಲೆಜೆಂಡ್ ಆಗಿದ್ರು. ಅವರ ಮನೆಯವರಿಗೆ ದುಖ ಭರಿಸೋ ಶಕ್ತಿ ದೇವರು ನೀಡಲಿ ಎಂದು ಹೇಳಿದ್ರು.Sign in to your account
Username or Email Address


Password

 Remember Me


