ಬಳ್ಳಾರಿ: ನಾಲ್ವರು ಕಾಲೇಜು ವಿದ್ಯಾರ್ಥಿಗಳು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ದೇವರಾಜ್, ಶ್ರೀನಿವಾಸ್, ಇಂದ್ರಸೇನಾ ಮತ್ತು ಸಂಜೀವ ನಾಪತ್ತೆಯಾದ ವಿದ್ಯಾರ್ಥಿಗಳು. ಬಳ್ಳಾರಿಯ ವಿ.ವಿ ಸಂಘದ ಕಾಲೇಜು ಮತ್ತು ಇತರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ಸ್ನೇಹಿತರು ಕಳೆದ 12ನೇ ತಾರೀಕಿನಿಂದ ನಾಪತ್ತೆಯಾಗಿದ್ದಾರೆ. ಇದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.ಕಾಣೆಯಾದ ವಿದ್ಯಾರ್ಥಿಗಳ ಪೈಕಿ ಶ್ರೀನಿವಾಸ್ ಎಂಬ ವಿದ್ಯಾರ್ಥಿಯ ಬೈಕ್ ಮತ್ತು ಪರ್ಸ್ ಬಳ್ಳಾರಿಯ ಹೊರವಲಯದ ಕಾಲುವೆಯ ಮೇಲೆ ಪತ್ತೆಯಾಗಿದೆ. ವಿದ್ಯಾರ್ಥಿಗಳು ಕಾಲುವೆ ನೀರಿನಲ್ಲಿ ಈಜಲು ಹೋಗಿ ಕಾಣೆಯಾಗಿರುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಅಲ್ಲದೇ ಕಳೆದ ನಾಲ್ಕು ದಿನದಿಂದ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದೆ.ಇದರಿಂದ ಪೋಷಕರು ಆತಂಕಗೊಂಡು ಬಳ್ಳಾರಿಯ ಕೌಲಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಷಕರು ಬುಧವಾರ ಎಸ್‍ಪಿ ಆರ್. ಚೇತನ್ ಅವರನ್ನ ಭೇಟಿ ಮಾಡಿ ವಿದ್ಯಾರ್ಥಿಗಳನ್ನು ಪತ್ತೆ ಮಾಡಲು ಸಹಾಯ ಮಾಡಬೇಕೆಂದು ಕೋರಿದ್ದಾರೆ.https://www.youtube.com/watch?v=Rx0lLw67DGwSign in to your account
Username or Email Address


Password

 Remember Me


